Advertisement
ನೂತನ ಬ್ಯಾಟ್ಸ್‌ಮನ್‌ಗೆ ಸ್ಟ್ರೈಕ್ :
Related Articles
Advertisement
ಆಚೀಚೆ ಹೋಗುವಂತಿಲ್ಲ :
ಬೌಲರ್ ರನ್‌ಅಪ್ ಆರಂಭಿಸಿದ ಮೇಲೆ ಫೀಲ್ಡರ್ ತನ್ನ ಸ್ಥಾನದಿಂದ ಆಚೀಚೆ ಹೋಗುವಂತಿಲ್ಲ. ಆಗ ಅಂಪಾಯರ್ ಆ ತಂಡಕ್ಕೆ 5 ರನ್ ದಂಡ ವಿಧಿಸುತ್ತಾರೆ. ಈ ರನ್ ಎದುರಾಳಿ ತಂಡಕ್ಕೆ ಸೇರುತ್ತದೆ. ಹಿಂದೆ ಆ ಎಸೆತ ಡೆಡ್ ಬಾಲ್ ಆಗುತ್ತಿತ್ತು.
ಎರಡೇ ನಿಮಿಷಗಳ ಅವಕಾಶ :
ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ವೇಳೆ ಓರ್ವ ಆಟಗಾರ ಔಟಾದ 2 ನಿಮಿಷಗಳಲ್ಲಿ ನೂತನ ಆಟಗಾರ ಕ್ರೀಸ್ ಇಳಿಯಬೇಕು. ಟಿ20 ಪಂದ್ಯಗಳಲ್ಲಿ ಒಂದೂವರೆ ನಿಮಿಷ. ಇಷ್ಟರೊಳಗೆ ಹೊಸ ಆಟಗಾರ ಕ್ರೀಸ್‌ಗೆ ಬಾರದಿದ್ದರೆ ಆತನನ್ನು ಔಟ್ ಆಗಲಿದ್ದಾನೆ.
ಎಂಜಲು ಬಳಸುವಂತಿಲ್ಲ :
ಕೊರೊನಾ ಸಮಯದಲ್ಲಿ ಜಾರಿಗೆ ತಂದ, ಚೆಂಡಿಗೆ ಎಂಜಲು ಬಳಕೆ ನಿಷೇಧವನ್ನು ಮುಂದುವರಿಸಲಾಗಿದೆ.
ಮಂಕಡ್ ಔಟ್ ಇಲ್ಲ :
ಬೌಲರ್ ಪಂದ್ಯದಲ್ಲಿ ಚೆಂಡನ್ನೆಸೆಯುವ ಮೊದಲೇ ನಾನ್ ಸ್ಟ್ರೈಕಿಂಗ್‌ನಲ್ಲಿರುವ ಆಟಗಾರ ಕ್ರೀಸ್ ಬಿಟ್ಟರೆ, ಅದಿನ್ನು “ಮಂಕಡ್ ಔಟ್’ ಎನಿಸದು. ಇದನ್ನು ಕೂಡ ರನೌಟ್ ಎಂದೇ ಇನ್ನು ಮುಂದೆ ಎಲ್ಲ ಪಂದ್ಯಗಳಲ್ಲೂ ಪರಿಗಣಿಸಲಾಗುವುದು.
ಓವರ್‌ಗೆ ನಿಗದಿತ ಸಮಯ :
ತಂಡವೊಂದು ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸಬೇಕು. ತಪ್ಪಿ ದರೆ ವಿಳಂಬವಾದ ಉಳಿದ ಓವರ್‌ಗಳವೇಳೆ ಫೀಲ್ಡಿಂಗ್ ತಂಡ ಬೌಂಡರಿ ಲೈನ್‌ನಲ್ಲಿದ್ದ ಓರ್ವ ಕ್ಷೇತ್ರರಕ್ಷಕನನ್ನು 30 ಯಾರ್ಡ್ ಸರ್ಕಲ್ ಒಳಗೆ ನಿಲ್ಲಿಸಬೇಕು. ಟಿ20ಯಲ್ಲಿ ಜಾರಿಯಲ್ಲಿದೆ.
ಸ್ಟ್ರೈಕರ್ ರನೌಟ್ ನಿಯಮ :
ಬೌಲಿಂಗ್ ಮಾಡುವ ಮೊದಲೇ ಬ್ಯಾಟರ್ ಕ್ರೀಸ್ ಬಿಟ್ಟು ಮುಂದೆ ಬಂದರೆ, ಬೌಲಿಂಗ್ ಮಾಡದೆ ಚೆಂಡನ್ನು ಸ್ಟಂಪ್‌ಗೆ ಎಸೆದು ಅಥವಾ ಕೀಪರ್‌ಗೆ ನೀಡಿ ರನೌಟ್ ಮಾಡುವ ಅವಕಾಶ ಇರದು. ಬದಲಾಗಿ ಆ ಎಸೆತ ಡೆಡ್ ಬಾಲ್ ಎನಿಸಿಕೊಳ್ಳುತ್ತದೆ.