Advertisement

ಆಯ್ಕೆ ಮಂಡಳಿ ವಿರುದ್ಧ ಹರ್ಭಜನ್‌ ಆಕ್ರೋಶ

10:52 AM May 27, 2017 | |

ಹೊಸದಿಲ್ಲಿ: ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಯೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಆಯ್ಕೆಯಾಗದ ಬಗ್ಗೆ ಹಿರಿಯ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಆಕ್ರೋಶಗೊಂಡಿದ್ದಾರೆ. 

Advertisement

ಜತೆಗೆ ಎಡಗೈ ಆರಂಭಕಾರ ಗೌತಮ್‌ ಗಂಭೀರ್‌ ಅವರನ್ನು ಕೈಬಿಟ್ಟದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್‌ಡಿ ಟಿವಿ ಸಂದರ್ಶನದ ವೇಳೆ ಭಜ್ಜಿ ತಮ್ಮ ನೇರ ಮಾತುಗಳ ಮೂಲಕ ಆಯ್ಕೆ ಮಂಡಳಿ ಮೇಲೆ ಹರಿಹಾಯ್ದರು. 

“ಐಪಿಎಲ್‌ನಂಥ ಪಂದ್ಯಾವಳಿಗಳಲ್ಲಿ ನಾವು ಆಡುವುದಾದರೂ ಏಕೆ? ಇಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾಗಬೇಕು ಎಂದ ಲ್ಲವೇ? ನನ್ನ ನಿರ್ವಹಣೆ ಆಯ್ಕೆ ಮಂಡಳಿಗೆ ಸಮಾ ಧಾನ ತರಲಿಲ್ಲ ಎಂದೇ ಭಾವಿಸೋಣ. ಆದರೆ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತ ಬಂದ ಗೌತಮ್‌ ಗಂಭೀರ್‌ ಅವರನ್ನಾದರೂ ಆರಿಸ ಬಹುದಿತ್ತಲ್ಲ?’ ಎಂದು ಹರ್ಭಜನ್‌ ಪ್ರಶ್ನಿಸಿದರು.

“ನನ್ನ ಆಯ್ಕೆ ಅಶ್ವಿ‌ನ್‌ ಅವರ ಫಿಟ್‌ನೆಸ್‌ ಅವಲಂಬಿಸಿರುತ್ತಿತ್ತು. ಅಶ್ವಿ‌ನ್‌ ಫಿಟ್‌ ಆದಲ್ಲಿ ಮೊದಲ ಆಯ್ಕೆ ಅವ ರದೇ ಆಗಿರುತ್ತಿತ್ತು. ಅಕಸ್ಮಾತ್‌ ಅಶ್ವಿ‌ನ್‌ ಲಭ್ಯರಾಗದೇ ಹೋದರಷ್ಟೇ ನಾನು ತಂಡದಲ್ಲಿರುತ್ತಿದ್ದೆ ಎಂದು ಭಾವಿಸಿದ್ದೆ. ಅಶ್ವಿ‌ನ್‌ ಫಿಟ್‌ ಆದುದರಿಂದ ನನ್ನ ಅವಕಾಶ ತಪ್ಪಿತು…’ ಎಂದೂ ಹರ್ಭಜನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next