ನವದೆಹಲಿ: ಜೂ.1ರಿಂದ 18ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿದಂತೆ 8 ಕ್ರಿಕೆಟಿಗರು ರಾಯಭಾರಿಗಳಾಗಿ ನೇಮಕವಾಗಿದ್ದಾರೆ. ಉಳಿದಂತೆ ಪಾಕಿಸ್ತಾನದ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಹಬೀಬುಲ್ ಬಶರ್, ಇಂಗ್ಲೆಂಡ್‌ನ ಲ್ಯಾನ್ ಬೆಲ್, ನ್ಯೂಜಿಲೆಂಡ್‌ನ ಶೇನ್ ಬಾಂಡ್, ಆಸ್ಟ್ರೇಲಿಯಾದ ಮೈಕ್ ಹಸ್ಸಿ, ಶ್ರೀಲಂಕಾದ ಕುಮಾರ ಸಂಗಕ್ಕರ, ದಕ್ಷಿಣ ಆಫ್ರಿಕಾದ
ಗ್ರೇಮ್ ಸ್ಮಿತ್ ರಾಯಭಾರಿಗಳಾಗಿದ್ದಾರೆ.