Advertisement

ಬಹುಮಾನ ಪ್ರಕಟಿಸಿದ ಐಸಿಸಿ: ವಿಶ್ವಕಪ್‌ ವಿಜೇತರಿಗೆ 13 ಕೋ. ರೂ.

10:25 PM Sep 30, 2022 | Team Udayavani |

ದುಬಾೖ: ಆಸ್ಟ್ರೇಲಿಯದ ಆತಿಥ್ಯದಲ್ಲಿ ಅ. 16ರಂದು ಆರಂಭ ವಾಗಲಿರುವ ಬಹು ನಿರೀಕ್ಷೆಯ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯ ಬಹುಮಾನ ಮೊತ್ತವನ್ನು ಕ್ರಿಕೆಟ್‌ ಆಡಳಿತ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.

Advertisement

16 ತಂಡಗಳು ಪಾಲ್ಗೊಳ್ಳಲಿರುವ ಈ ಪ್ರತಿಷ್ಠಿತ ಕೂಟಕ್ಕಾಗಿ ಐಸಿಸಿ ಒಟ್ಟು 5.6 ಮಿಲಿಯನ್‌ ಡಾಲರ್‌ ಮೊತ್ತವನ್ನು (45.5 ಕೋ.ರೂ.) ಬಹುಮಾನಕ್ಕಾಗಿ ವ್ಯಯಿಸಲಿದೆ.

ಅದರಂತೆ ಇಲ್ಲಿ ಚಾಂಪಿಯನ್‌ ಆಗಲಿರುವ ತಂಡ 1.6 ಮಿಲಿಯನ್‌ ಡಾಲರ್‌, ಅಂದರೆ 13 ಕೋಟಿ ರೂ. ಬಹುಮಾನವನ್ನು ಜೇಬಿಗೆ ಇಳಿಸಲಿದೆ. ರನ್ನರ್ ಅಪ್‌ ತಂಡಕ್ಕೆ ಇದರ ಅರ್ಧದಷ್ಟು ಮೊತ್ತ ಲಭಿಸಲಿದೆ (6.52 ಕೋ.ರೂ.). ಇದು 2021ರಷ್ಟೇ ಬಹುಮಾನ ಮೊತ್ತವಾಗಿದೆ.

ಸೆಮಿಫೈನಲ್‌ನಲ್ಲಿ ಪರಾಭವಗೊ ಳ್ಳುವ ತಂಡಗಳಿಗೆ ತಲಾ 4 ಲಕ್ಷ ಡಾಲರ್‌ (3.26 ಕೋ.ರೂ.), ಸೂಪರ್‌ 12 ಹಂತದಿಂದ ನಿರ್ಗಮಿಸಲಿರುವ 8 ತಂಡಗಳಿಗೆ ತಲಾ 70 ಸಾವಿರ ಡಾಲರ್‌ (57 ಲಕ್ಷ ರೂ.) ಮೊತ್ತವನ್ನು ನೀಡಲಾಗುವುದು. 2021ರ ಮಾದರಿ ಯಂತೆ ಸೂಪರ್‌-12 ಹಂತದಲ್ಲಿ ಸಾಧಿಸುವ ಪ್ರತಿಯೊಂದು ಜಯಕ್ಕೂ ತಂಡ 40 ಸಾವಿರ ಡಾಲರ್‌ (32.5 ಲಕ್ಷ ರೂ.) ಪಡೆಯಲಿದೆ.

8 ತಂಡಗಳ ನೇರ ಪ್ರವೇಶ
ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಈಗಾಗಲೇ 8 ತಂಡಗಳು ನೇರವಾಗಿ ಸೂಪರ್‌-12 ಹಂತವನ್ನು ಪ್ರವೇಶಿ ಸಿವೆ. ಇವುಗಳೆಂದರೆ ಆಸ್ಟ್ರೇಲಿಯ, ಭಾರತ, ಪಾಕಿಸ್ಥಾನ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ.

Advertisement

ಉಳಿದ 8 ತಂಡಗಳು ಮೊದಲ ಸುತ್ತಿನಲ್ಲಿ ಸೆಣಸಲಿವೆ. “ಎ’ ವಿಭಾಗದಲ್ಲಿ ಶ್ರೀಲಂಕಾ, ನಮೀ ಬಿಯಾ, ನೆದರ್ಲೆಂಡ್ಸ್‌ ಮತ್ತು ಯುಎಇ; “ಬಿ’ ವಿಭಾಗದಲ್ಲಿ ವೆಸ್ಟ್‌ ಇಂಡೀಸ್‌, ಸ್ಕಾಟ್ಲೆಂಡ್‌, ಐರ್ಲೆಂಡ್‌ ಮತ್ತು ಜಿಂಬಾಬ್ವೆ ತಂಡಗಳಿವೆ. ಈ ಎಲ್ಲ ತಂಡಗಳಿಗೆ ತಲಾ 40 ಸಾವಿರ ಡಾಲರ್‌ ಲಭಿಸಲಿದೆ.

ಸೂಪರ್‌-12 ಮುಖಾಮುಖಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ರನ್ನರ್ ಅಪ್‌ ನ್ಯೂಜಿಲ್ಯಾಂಡ್‌ ಮಧ್ಯೆ ಅ. 22ರಂದು ಸಿಡ್ನಿಯಲ್ಲಿ ನಡೆಯುತ್ತದೆ. ಅದೇ ದಿನ ಪರ್ತ್‌ನಲ್ಲಿ ಇಂಗ್ಲೆಂಡ್‌-ಅಫ್ಘಾನಿಸ್ಥಾನ ಪರಸ್ಪರ ಎದುರಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next