Advertisement

ಟಿ20 ವಿಶ್ವಕಪ್‌ ಸೆಮಿಫೈನಲ್ಸ್‌  ಅಂಪಾಯರ್ ಯಾದಿ ಪ್ರಕಟ

10:59 PM Nov 07, 2022 | Team Udayavani |

ಮೆಲ್ಬರ್ನ್: ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಸೆಮಿಫೈನಲ್‌ನತ್ತ ಹೊರಳಿದೆ. ಬುಧವಾರ ನ್ಯೂಜಿಲ್ಯಾಂಡ್‌-ಪಾಕಿಸ್ಥಾನ, ಗುರುವಾರ ಭಾರತ-ಇಂಗ್ಲೆಂಡ್‌ ತಂಡಗಳು ಉಪಾಂತ್ಯದಲ್ಲಿ ಸೆಣಸಲಿವೆ. ಈ ಪಂದ್ಯಗಳ ಅಂಪಾಯರ್, ಮ್ಯಾಚ್‌ ರೆಫ್ರಿಗಳ ಯಾದಿಯನ್ನು ಐಸಿಸಿ ಪ್ರಕಟಿಸಿದೆ.

Advertisement

ಸಿಡ್ನಿಯಲ್ಲಿ ನಡೆಯುವ ನ್ಯೂಜಿ ಲ್ಯಾಂಡ್‌-ಪಾಕಿಸ್ಥಾನ ತಂಡಗಳ ನಡುವಿನ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ಮರೈಸ್‌ ಎರಾಸ್ಮಸ್‌ ಮತ್ತು ರಿಚರ್ಡ್‌ ಇಲ್ಲಿಂಗ್‌ವರ್ತ್‌ ಮೈದಾನದ ಆಂಪಾಯರ್‌ಗಳಾಗಿ ಕರ್ತವ್ಯ ನಿಭಾಯಿಸಲಿದ್ದಾರೆ. ತೃತೀಯ ಅಂಪಾಯರ್‌ ಆಗಿರುವವರು ರಿಚರ್ಡ್‌ ಕೆಟ್ಲಬರೋ. ಫೋರ್ತ್‌ ಅಂಪಾಯರ್‌ ಮೈಗಲ್‌ ಗಾಫ್. ಈ ಮುಖಾಮುಖಿಯ ಮ್ಯಾಚ್‌ ರೆಫ್ರಿ ಇಂಗ್ಲೆಂಡ್‌ನ‌ ಕ್ರಿಸ್‌ ಬ್ರಾಡ್‌.

ಭಾರತ-ಇಂಗ್ಲೆಂಡ್‌ ನಡುವೆ ಅಡಿಲೇಡ್‌ ಓವಲ್‌ನಲ್ಲಿ ನಡೆಯುವ ದ್ವಿತೀಯ ಸೆಮಿಫೈನಲ್‌ ಪಂದ್ಯದ ಮೈದಾನದ ಅಂಪಾಯರ್‌ಗಳಾಗಿ ರುವವರು ಕುಮಾರ ಧರ್ಮಸೇನ ಮತ್ತು ಪಾಲ್‌ ರೀಫೆಲ್‌. ಥರ್ಡ್‌ ಅಂಪಾಯರ್‌ ಕ್ರಿಸ್‌ ಗಫಾನಿ, ಫೋರ್ತ್‌ ಅಂಪಾಯರ್‌ ರಾಡ್‌ ಟ್ಯುಕರ್‌. ಮ್ಯಾಚ್‌ ರೆಫ್ರಿಯಾಗಿ ಆಸ್ಟ್ರೇಲಿಯದ ಡೇವಿಡ್‌ ಬೂನ್‌ ಕರ್ತವ್ಯ ನಿರ್ವಹಿಸಲಿದ್ದಾರೆ.

ಸೆಮಿಫೈನಲ್‌ ಪಂದ್ಯಗಳ ಫ‌ಲಿ ತಾಂಶದ ಬಳಿಕ ಫೈನಲ್‌ ಪಂದ್ಯದ ಅಂಪಾಯರ್‌ ಯಾದಿ ಪ್ರಕಟಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next