ಮುಂಬಯಿ : ಕಳೆದ ಬುಧವಾರ ನಾಪತ್ತೆಯಾಗಿದ್ದ 21ರ ಹರೆಯದ ಪಲ್ಲವಿ ವಿಕಾಮ್‌ಸೇ (ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇದರ ಅಧ್ಯಕ್ಷ ನೀಲೇಶ್ ವಿಕಾಮ್‌ಸೇ ಅವರ ಪುತ್ರಿ) ಶವ ನಗರ ಹೊರವಲಯದ ರೈಲು ಹಳಿಯ ಮೇಲೆ ಪತ್ತೆಯಾಗಿರುವುದಾಗಿ ಮಾಧ್ಯಮ ವರದಿಗಳು ಇಂದು ಶುಕ್ರವಾರ ತಿಳಿಸಿವೆ.
ಕಾನೂನು ವಿದ್ಯಾರ್ಥಿನಿಯಾಗಿರುವ ಪಲ್ಲವಿ ಅವರ ಶವ ಪರೇಲ್ ಮತ್ತು ಕುರೇ ರಸ್ತೆ ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಪತ್ತೆಯಾಯಿತೆಂದು ಡಿಎನ್‌ಎ ವರದಿ ಮಾಡಿದೆ.
ಪಲ್ಲವಿ ಅವರ ಶವ ಪತ್ತೆಯಾದ ಸ್ಥಳದಲ್ಲಿ, ಕಳವಾಗಿರಬಹುದಾದ ಆಕೆಯ ಮೊಬೈಲ್ ಫೋನ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಆದರೆ ಮೊಬೈಲ್ ಮಾತ್ರವಲ್ಲದೆ ಪಲ್ಲವಿ ಅವರ ಇತರ ವಸ್ತುಗಳು ಕೂಡ ನಾಪತ್ತೆಯಾಗಿವೆ.
ಪಲ್ಲವಿ ಅವರ ಶವ ರೈಲು ಹಳಿಯಲ್ಲಿ ಬಿದ್ದುಕೊಂಡಿದ್ದುದನ್ನು ಬುಧವಾರ ಸಂಜೆ 6.30ರ ಹೊತ್ತಿಗೆ ಸರಕಾರಿ ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದರು. ಅದೇ ದಿನ ಆಕೆ ನಾಪತ್ತೆಯಾಗಿದ್ದರು. ರೈಲು ಮತ್ತು ಪೊಲೀಸ್ ಠಾಣೆಗಳಲ್ಲಿ ಆಕೆಯ ಶವದ ಫೋಟೋವನ್ನು ಪ್ರದರ್ಶಿಸಲಾದ ಬಳಿಕವಷ್ಟೇ ಗುರುತನ್ನು ಪತ್ತೆ ಹಚ್ಚಲಾಗಿತ್ತು.
Related Articles
ಪಲ್ಲವಿ ಅವರ ಮನೆಯವರಿಗೆ ಆಕೆಯ ಸಾವಿನಲ್ಲಿ ಯಾವುದೇ ಶಂಕೆ ವ್ಯಕ್ತವಾಗಿಲ್ಲ. ನಾವು ಇದೊಂದು ಆಕಸ್ಮಿಕ ಸಾವು ಎಂಬ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ಬೋಬಡೆ ತಿಳಿಸಿದ್ದಾರೆ.