Advertisement

IBM:ಸ್ವಯಂ ರಾಜೀನಾಮೆ ನೀಡುವಂತೆ ಉದ್ಯೋಗಿಗಳ ಮೇಲೆ ಒತ್ತಡ

12:46 AM Mar 08, 2024 | Vishnudas Patil |

ಹೊಸದಿಲ್ಲಿ: ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿರುವ ಸಾಫ್ಟ್ ವೇರ್‌ ದೈತ್ಯ ಕಂಪೆನಿ ಐಬಿಎಂ, ಸ್ವಯಂ ರಾಜೀನಾಮೆ ನೀಡುವಂತೆ ಉದ್ಯೋಗಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಜನ ವರಿಯಲ್ಲಿ 3900 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದ ಕಂಪೆನಿ ಈ ಬಾರಿ ಉದ್ಯೋಗ ಕಡಿತಕ್ಕೆ ಹೊಸ ತಂತ್ರದ ಮೊರೆ ಹೋಗಿದೆ. ಕಂಪೆನಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲವೋ ಅವರು ರಾಜೀನಾಮೆ ನೀಡಬಹುದು. ಕೆಲಸ ಮಾಡಲು ಇಚ್ಛಿ ಸುವವರು ಮುಂದುವರಿಯಬಹುದು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next