ನವದೆಹಲಿ : ಗೂಗಲ್, ಟ್ವಿಟರ್, ಅಮೆಜಾನ್ ಆಯ್ತು, ಈಗ ಉದ್ಯೋಗ ಕಡಿತದ ಸರದಿ ಐಬಿಎಂ ಹಾಗೂ ಸ್ಯಾಪ್‌ನದ್ದು. ಸಾಲು-ಸಾಲು ಟೆಕ್ ಸಂಸ್ಥೆಗಳು ಉದ್ಯೋಗ ಕಡಿತ ಘೋಷಿಸುತ್ತಿರುವ ನಡುವೆಯೇ, ಎರಡು ಸಂಸ್ಥೆಗಳೂ ಕೂಡ ಕ್ರಮವಾಗಿ 3,900 ಹಾಗೂ 3,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿವೆ.
ಅಮೆರಿಕ ಮೂಲದ ಟೆಕ್ ಸಂಸ್ಥೆಯಾದ ಐಬಿಎಂ ವಾರ್ಷಿಕ ಆದಾಯ ಗುರಿಯನ್ನು ತಲುಪಲಾಗದ ಕಾರಣ, ಸಂಸ್ಥೆಯ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ತನ್ನ ಜಾಗತಿಕ ಉದ್ಯೋಗಿಗಳ ಪೈಕಿ 3,900 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಇದರ ಜತೆಗೆ ಜರ್ಮನ್ ಮೂಲದ ಟೆಕ್ ಸಂಸ್ಥೆ ಸ್ಯಾಪ್, ದಕ್ಷತೆಯನ್ನು ಸುಧಾರಿಸುವ ಕಾರಣ ನೀಡಿ, 3000 ಉದ್ಯೋಗ ಕಡಿತ ಘೋಷಿಸಿದೆ.
ಇದನ್ನೂ ಓದಿ: ಟೊಯೋಟಾ ಮೋಟಾರ್‌ನ ಅಧ್ಯಕ್ಷರಾಗಿ ಅಕಿಯೋ ಟೊಯೋಡಾ ಆಯ್ಕೆ