Advertisement

Watch Video: Mt Everestನ ಕ್ಯಾಂಪ್‌ ಸ್ಥಳದಲ್ಲೂ ರಾಶಿ, ರಾಶಿ ಕಸ! ಜಾಲತಾಣದಲ್ಲಿ ಆಕ್ರೋಶ

05:25 PM May 29, 2023 | Team Udayavani |

ನವದೆಹಲಿ:ಭಾರತದಲ್ಲಾಗಲಿ ಅಥವಾ ದೇಶದ ಹೊರಗಾಗಲಿ ನಾವು ಯಾವುದೇ ಸ್ಥಳಕ್ಕೂ ಭೇಟಿ ನೀಡಿದರೂ ಪರಿಸರ ಕಾಳಜಿ ನಮ್ಮ ಮುಖ್ಯ ಕರ್ತವ್ಯವಾಗಿರಬೇಕು. ಸಿಕ್ಕ, ಸಿಕ್ಕಲ್ಲಿ ಕಸ ಎಸೆದು, ಪರಿಸರವನ್ನು ಕಲುಷಿತಗೊಳಿಸುವುದು ಅಪಾಯಕ್ಕೆ ಎಡೆ ಮಾಡಿಕೊಟ್ಟಂತೆ ಎಂಬ ಎಚ್ಚರಿಕೆ ಅಗತ್ಯ. ಅದೇ ರೀತಿ ಮೌಂಟ್‌ ಎವರೆಸ್ಟ್‌ ಏರುವ ಪರ್ವತಾರೋಹಿಗಳ ಮೇಲೂ ತ್ಯಾಜ್ಯದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಆದರೆ ಮೌಂಟ್‌ ಎವರೆಸ್ಟ್‌ ನಲ್ಲೂ ತ್ಯಾಜ್ಯದ ಗುಡ್ಡೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ಇದನ್ನೂ ಓದಿ:Viral Video: ಫಿಲಡೆಲ್ಫಿಯಾ ಬೀದಿ, ಬೀದಿಯಲ್ಲಿ ವಿಚಿತ್ರ ವರ್ತನೆ…ಏನಿದು ಜೋಂಬಿ ಡ್ರಗ್‌ !

ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಅವರು ಹೃದಯ ವಿದ್ರಾವಕ ಸನ್ನಿವೇಶ ತೋರಿಸುವ ವಿಡಿಯೋವನ್ನು ಶೇರ್‌ ಮಾಡಿದ್ದು, ಮೌಂಟ್‌ ಎವರೆಸ್ಟ್‌ ನ ಕ್ಯಾಂಪ್‌ ಸ್ಥಳದಲ್ಲಿ ಪ್ಲಾಸ್ಟಿಕ್‌ ಕಸದ ರಾಶಿ ತುಂಬಿಕೊಂಡಿದ್ದು, ಪರಿಸರವನ್ನು ಕಲುಷಿತಗೊಳಿಸಿರುವುದು ಬಹಿರಂಗವಾಗಿದೆ.

ಮನುಷ್ಯರು ಪ್ಲಾಸ್ಟಿಕ್‌ ತ್ಯಾಜ್ಯದ ವಿಷಯದಲ್ಲಿ ಮೌಂಟ್‌ ಎವರೆಸ್ಟ್‌ ಸ್ಥಳವನ್ನು ಬಿಟ್ಟಿಲ್ಲ ಎಂಬ ಕ್ಯಾಪ್ಶನ್‌ ನೊಂದಿಗೆ ಸುಪ್ರಿಯಾ ಅವರು ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

Advertisement

ವಿಡಿಯೋವನ್ನು ವೀಕ್ಷಿಸಿದ ಅಂರ್ತಜಾಲ ಓದುಗರು ಆಕ್ರೋಶ ವ್ಯಕ್ತಪಡಿಸಿದ್ದು, “ಇದೊಂದು ಭಯಾನಕ ಸ್ಥಳವಾಗಿದೆ..ಓಹ್…ಇದು ನಿಜಕ್ಕೂ ದುಃಖಕರ ವಿಷಯವಾಗಿದ್ದು, ಶೀಘ್ರವೇ ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನನ್ನು ಜಾರಿಗೆ ತರಬೇಕಾಗಿದೆ” ಎಂದು ಒತ್ತಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next