ಬೆಂಗಳೂರು: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ. ಎಸ್ಪಿ ದರ್ಜೆಯ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಡಿ. ಕಿಶೋರ್ ಬಾಬು (ನಿಸ್ತುಂತು), ಚನ್ನಬಸವಣ್ಣ ಲಂಗೋಟಿ ( ಬೀದರ್), ಎಸ್. ಹೃಷಿಕೇಶ್ ಭಗವಾನ್ (ಗುಪ್ತವಾರ್ತೆ), ಎ. ವಿಕ್ರಂ (ದಕ್ಷಿಣ ಕನ್ನಡ ಜಿಲ್ಲೆ) ಅವರನ್ನು ವರ್ಗಾವಣೆ ಮಾಡಲಾಗಿದೆ.
ಆರು ಮಂದಿ ಐಎಎಸ್
ಎಸ್. ಪೂವಿತಾ (ಚಾಮರಾಜನಗರ ಜಿ.ಪಂ. ಸಿಇಒ), ಕೆ.ಎಂ. ಗಾಯಿತ್ರಿ (ಮೈಸೂರು ಜಿ.ಪಂ. ಸಿಇಒ), ಬಿ.ಆರ್. ಪೂರ್ಣಿಮಾ (ಹಾಸನ ಜಿ.ಪಂ. ಸಿಇಒ), ಜಿ. ಲಿಂಗಮೂರ್ತಿ (ಆರೋಗ್ಯ ಮತ್ತು ಕು.ಕ. ಇಲಾಖೆಯ ವಿಶೇಷಾಧಿಕಾರಿ ಮತ್ತು ಉಪ ಕಾರ್ಯದರ್ಶಿ), ಬಿ. ಸದಾಶಿವ ಪ್ರಭು ( ವಿಜಯಪುರ ಜಿ.ಪಂ. ಸಿಇಒ), ರಾಹುಲ್ ಶರಣಪ್ಪ ಶಂಕನೂರು (ಬಳ್ಳಾರಿ ಜಿ.ಪಂ. ಸಿಇಒ) ಅವರನ್ನು ವರ್ಗಾವಣೆ ಮಾಡಲಾಗಿದೆ.