Advertisement

ಫ್ಲಾರಿಡಾ ಚಂಡಮಾರುತ: 77 ಕ್ಕೂ ಹೆಚ್ಚು ಸಾವು

08:50 PM Oct 02, 2022 | Team Udayavani |

ಫೋರ್ಟ್‌ ಮೈರಸ್‌: ಅಮೆರಿಕದ ಫ್ಲಾರಿಡಾಕ್ಕೆ ಅಪ್ಪಳಿದ ಇಯಾನ್‌ ಚಂಡಮಾರುತದಿಂದಾಗಿ ಅಸುನೀಗಿದವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.

Advertisement

ರಕ್ಷಣೆ ಮತ್ತು ಪರಿಹಾರ ಬಿರುಸಾಗಿ ನಡೆಯುತ್ತಿದೆ. ಹಲವು ಸ್ಥಳಗಳಲ್ಲಿ ಇನ್ನೂ ವಿದ್ಯುತ್‌ ಪೂರೈಕೆಯನ್ನು ಸರಿಪಡಿಸಲಾಗಿಲ್ಲ. ಪ್ರವಾಹ ಮತ್ತು ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಹೋಗಿವೆ, ಸೇತುವೆಗಳು ಮುರಿದು ಬಿದ್ದಿವೆ. ಹಲವಾರು ಸ್ಥಳಗಳಲ್ಲಿ ಪ್ರವಾಹ, ಮಳೆಯ ಆಘಾತದಿಂದ ಇದ್ದ ನೂರಾರು ಮಂದಿಯನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡಿವೆ. ನೀರು, ಆಹಾರದ ಪೂರೈಕೆಯಲ್ಲಿ ಇನ್ನೂ ವ್ಯತ್ಯಯ ಉಂಟಾಗಿದೆ.

ಪ್ರಧಾನಿ ಸಾಂತ್ವನ: ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಟ್ವೀಟ್‌ ಮಾಡಿ. “ಐಯಾನ್‌ ಚಂಡಮಾರುತದಿಂದಾಗಿ ಹಲವು ಜೀವಗಳನ್ನು ಕಳೆದುಕೊಂಡಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ನನ್ನ ಸಂತಾಪಗಳು’ ಎಂದು ಬರೆದುಕೊಂಡಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next