Advertisement

ಬೆಂಕಿಯ ಉಂಡೆಯಂತೆ ಉರುಳಿದವು; 2 ವಿಮಾನ ದುರಂತ ಬಗ್ಗೆ ಪ್ರತ್ಯಕ್ಷದರ್ಶಿಯ ಬಣ್ಣನೆ

08:38 PM Jan 28, 2023 | Team Udayavani |

ನವದೆಹಲಿ/ಮೊರೇನಾ: “ದೊಡ್ಡ ಸ್ಫೋಟವಾದಂತೆ ಅನುಭವ ಹಾಗೂ ಸದ್ದು ಕೇಳಿಸಿತು. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಎರಡು ಉಂಡೆಗಳು ಗಗನದಿಂದ ಉರುಳಿ ಬೀಳುವುದನ್ನು ನಾವೇ ಕಣ್ಣಾರೆ ಕಂಡಿದ್ದೇವೆ’

Advertisement

– ಹೀಗೆಂದು ಮಧ್ಯಪ್ರದೇಶದ ಮೊರೇನಾದಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್‌ 30 ಎಂಕೆಐ ಮತ್ತು ಮಿರಾಜ್‌-2 ಸಾವಿರ ಯುದ್ಧ ವಿಮಾನಗಳು ಅಪಘಾತಕ್ಕೆ ಈಡಾದ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದ ಪರಿ ಇದು. ಜತೆಗೆ ಸಮವಸ್ತ್ರ ಧರಿಸಿದ್ದ ಇಬ್ಬರು ಯೋಧರು ಗಾಯಗೊಂಡು ನರಳುತ್ತಾ ಇದ್ದದ್ದನ್ನು ನೋಡಿದೆವು ಎಂದು ಹೇಳಿದ್ದಾರೆ. ಅವರಿಬ್ಬರು ಜೀವದಲ್ಲಿಯೇ ಇದ್ದರು. ಆದರೆ, ಮತ್ತೊಂದು ವಿಮಾನ (ಮಿರಾಜ್‌-2000)ದಲ್ಲಿ ಇದ್ದ ಗಾಯಾಳು ಪೈಲಟ್‌ ಅಸುನೀಗಿದ್ದ ಎಂದು ವಿವರಿಸಿದ್ದಾರೆ.

ಬೆಳಗ್ಗೆ 10.30ರ ಸುಮಾರಿಗೆ ದೊಡ್ಡ ಸ್ಫೋಟವಾದಂತೆ ಸದ್ದು ಕೇಳಿತು. ನಂತರ ನೋಡುತ್ತಿದ್ದಂತೆಯೇ ಎರಡು ಬೆಂಕಿಯ ಉಂಡೆಗಳು ಆಗಸದಿಂದ ಬೀಳುತ್ತಿರುವುದು ಕಂಡು ಬಂದಿತು. ಅದರ ನಡುವೆಯೇ ಇಬ್ಬರು ಪ್ಯಾರಾಚೂಟ್‌ಗಳ ಮೂಲಕ ಇಳಿಯುತ್ತಿರುವುದೂ ಕಂಡು ಬಂದಿತು ಎಂದು ಪ್ರತಾಪ್‌ಗ್ಢದ ಗ್ರಾ.ಪಂ. ಮುಖ್ಯಸ್ಥ ಶೈಲೇಂದ್ರ ಶಖ್ಯ ಹೇಳಿದ್ದಾರೆ.

ಭರತ್‌ಪುರದಲ್ಲೂ ಬಿತ್ತು:
ವಿಮಾನಗಳ ಅವಶೇಷಗಳು ಜಿಲ್ಲಾ ಕೇಂದ್ರ ಮೊರೇನಾದಿಂದ 75 ಕಿಮೀ ದೂರದಲ್ಲಿ ಇರುವ ಪಹಾರ್‌ಗಢ ಮತ್ತು 100 ಕಿಮೀ ದೂರದಲ್ಲಿ ಇರುವ ರಾಜಸ್ಥಾನದ ಭರತ್‌ಪುರದಲ್ಲಿಯೂ ಬಿದ್ದಿತ್ತು. ಅವಶೇಷಗಳು ಬಿದ್ದ ನಂತರವೂ ಹೊತ್ತಿ ಉರಿಯುತ್ತಿದ್ದವು. ನಾವೆಲ್ಲರೂ ನೋಡುತ್ತಿದ್ದಂತೆಯೇ ಐಎಎಫ್ನ ಹೆಲಿಕಾಪ್ಟರ್‌ ಆಗಮಿಸಿ, ಗ್ವಾಲಿಯರ್‌ಗೆ ಗಾಯಾಳುಗಳನ್ನು ಕರೆದೊಯ್ದಿದೆ ಎಂದರು.

15 ಗ್ರಾಮಗಳ ಜನರು:
ಹದಿನೈದು ಗ್ರಾಮಗಳ 1,500ಕ್ಕೂ ಹೆಚ್ಚು ಮಂದಿ ಸ್ಥಳಕ್ಕೆ ಆಗಮಿಸಿದ್ದರು. ಈ ಪೈಕಿ ಕೆಲವರು ಮಣ್ಣು ಹಾಕಿ ಬೆಂಕಿಯನ್ನು ನಂದಿಸಲು ಪ್ರಯತ್ನ ಮಾಡಿದ್ದಾರೆ.

Advertisement

ರಾಜನಾಥ್‌ ಸಭೆ:
ಘಟನೆಯ ಬಗ್ಗೆ ಮಾಹಿತಿ ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿ.ಆರ್‌.ಚೌಧರಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ. ಘಟನೆಯ ಬಗ್ಗೆ ಕಾರಣ ತಿಳಿದುಕೊಳ್ಳಲು ಕೋರ್ಟ್‌ ಆಫ್ ಎನ್‌ಕ್ವಯರಿಗೆ ಆದೇಶ ನೀಡಲಾಗಿದೆ.

ಹಿಂದಿನ ದುರ್ಘ‌ಟನೆಗಳು
2022 ಜುಲೈ- ಬಾರ್ಮರ್‌ನಲ್ಲಿ ಮಿಗ್‌ 21 ಪತನ ಇಬ್ಬರ ದುರ್ಮರಣ
2022 ಅಕ್ಟೋಬರ್‌- ಅರುಣಾಚಲದ ಟ್ಯುಟಿಂಗ್‌ನಲ್ಲಿ ಭೂಸೇನೆಯ ಕಾಪ್ಟರ್‌ ಪತನ
2021 ಅ.3- ಪಠಾಣ್‌ಕೋಟ್‌ನಲ್ಲಿ ಭೂಸೇನೆಯ ಕಾಪ್ಟರ್‌ ಪತನ; ಇಬ್ಬರು ಸಾವು
2019 ಅಕ್ಟೋಬರ್‌- ಪೂಂಛ…ನಲ್ಲಿ ಧ್ರುವ ಹೆಲಿಕಾಪ್ಟರ್‌ ದುರಂತ; ಇಬ್ಬರ ಸಾವು
2017 ಮಾರ್ಚ್‌- 2021 ಡಿ.31- 31 ಮಂದಿಯ ಜೀವ ಹಾನಿ

ಯಾವುದೆಲ್ಲ ವಿಮಾನ, ಕಾಪ್ಟರ್‌ಗಳು?
15- ಮಿಲಿಟರಿ ಕಾಪ್ಟರ್‌ಗಳು
4- ಅಡ್ವಾನ್ಸ್‌ ಲೈಟ್‌ ಹೆಲಿಕಾಪ್ಟರ್‌, 4- ಚೀತಾ, 2- ಅಡ್ವಾನ್ಸ್‌ ಲೈಟ್‌ ಹೆಲಿಕಾಪ್ಟರ್‌ (ಡಬ್ಲ್ಯೂಎಸ್‌ಐ), 3-ಎಂಐ-17ವಿ5
ಭೂಸೇನೆ, ಐಎಎಫ್ ಗೆ ಸೇರಿದ ತಲಾ 7 ಕಾಪ್ಟರ್‌ಗಳೂ ಪತನ

Advertisement

Udayavani is now on Telegram. Click here to join our channel and stay updated with the latest news.

Next