Advertisement

ಭಾರತೀಯ ವಾಯುಪಡೆಯ ಮಿಗ್ 21 ವಿಮಾನ ಪತನ, ಪೈಲಟ್ ಸಾವು

02:17 PM Jul 18, 2018 | Team Udayavani |

ನವದೆಹಲಿ: ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಿಂದ ಹೊರಟಿದ್ದ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ಮಿಗ್ 21 ವಿಮಾನ ಪತನಗೊಂಡ ಘಟನೆ ಬುಧವಾರ ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಪ್ರಾಥಮಿಕ ಮಾಹಿತಿ ಪ್ರಕಾರ, ಪೈಲಟ್ ಸಾವಿಗೀಡಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಘಟನೆ ಸಂಭವಿಸಿದ್ದ ಪಟ್ಟಾ ಜಾಟಿಯಾನ್ ಹಳ್ಳಿಯತ್ತ ರಕ್ಷಣಾ ತಂಡ ದೌಡಾಯಿಸಿರುವುದಾಗಿ ವರದಿ ವಿವರಿಸಿದೆ.

ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಸಂಭವಿಸಿದ್ದ ಭಾರತೀಯ ವಾಯುಪಡೆಯ ಮಿಗ್ 21 ಜೆಟ್ ಪತನದಲ್ಲಿ ಪೈಲಟ್ ಸಾವಿಗೀಡಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next