ಬೆಂಗಳೂರು: ಭಾರತೀಯ ವಾಯುಸೇನೆಯ(ಐಎಎಫ್) ಎಂಐ 17 ಹೆಲಿಕಾಪ್ಟರ್ ಬುಧವಾರ ತುರ್ತು ಭೂಸ್ಪರ್ಶದ ಮೂಲಕ ಲ್ಯಾಂಡಿಂಗ್ ಆದ ಘಟನೆ ಮಂಡ್ಯದಲ್ಲಿ ನಡೆದಿದೆ.
Advertisement
ದಿಢೀರ್ ಭೂಸ್ಪರ್ಶದಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ. ರಕ್ಷಣಾ ಪಿಆರ್ ಒ ಮಾಹಿತಿ ಪ್ರಕಾರ, ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿರುವುದಾಗಿ ವಿವರಿಸಿದೆ.
ಮೈಸೂರು ದಸರಾಕ್ಕಾಗಿ ನಿಯೋಜನೆಗೊಂಡಿದ್ದ ಐಎಎಫ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ತುರ್ತಾಗಿ ಲ್ಯಾಂಡಿಂಗ್ ಮಾಡಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ಹೆಲಿಕಾಪ್ಟರ್ ಮೈಸೂರಿಗೆ ತೆರಳಿರುವುದಾಗಿ ಪ್ರಕಟಣೆ ತಿಳಿಸಿದೆ.