Advertisement

ಐಎಎಫ್ ಗೆ ದೇಶಿಯ ನಿರ್ಮಿತ ಎಲ್‌ಸಿಎಚ್‌ ಬಲ; ಇಂದು ಅಧಿಕೃತವಾಗಿ ಸೇನೆಗೆ ಸೇರ್ಪಡೆ

08:23 PM Oct 02, 2022 | Team Udayavani |

ನವದೆಹಲಿ: ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಲಘು ಯುದ್ಧ ಹೆಲಿಕಾಪ್ಟರ್‌ಗಳು ಸೇರ್ಪಡೆಯಾಗುತ್ತಿವೆ.

Advertisement

ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌) ತಯಾರಿಸಿರುವ ಲೈಟ್‌ ಕಾಂಬ್ಯಾಟ್‌ ಹೆಲಿಕಾಫ್ಟರ್‌ಗಳು(ಎಲ್‌ಸಿಎಚ್‌) ಸೋಮವಾರದಂದು ಭಾರತೀಯ ವಾಯುಪಡೆ(ಐಎಎಫ್)ಗೆ ಸೇರ್ಪಡೆಯಾಗಲಿವೆ.

ಅತಿ ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆ:
ಎಲ್‌ಸಿಎಚ್‌ಗಳು ಅತಿ ಎತ್ತರದ ಪ್ರದೇಶದಲ್ಲಿ ನಿರಾಯಾಸವಾಗಿ ಕಾರ್ಯಾಚರಣೆ ನಡೆಸಬಲ್ಲವು. ಅವಳಿ ಎಂಜಿನ್‌ ಹೊಂದಿರುವ ಎಲ್‌ಸಿಎಚ್‌, 5.8 ಟನ್‌ ತೂಕವಿದೆ. 16,400 ಅಡಿ ಎತ್ತರದಲ್ಲಿ ಟೇಕ್‌ ಆಫ್ ಮತ್ತು ಲ್ಯಾಂಡಿಂಗ್‌ ಸಾಮರ್ಥ್ಯ ಹೊಂದಿರುವ ವಿಶ್ವದ ಏಕೈಕ ಯುದ್ಧ ಹೆಲಿಕಾಪ್ಟರ್‌ ಆಗಿದೆ.

ರಾತ್ರಿ ಸಮಯದಲ್ಲೂ ಯಶಸ್ವಿ ಕಾರ್ಯನಿರ್ವಹಣೆ:
ಒಣ ಮರುಭೂಮಿಯ ವಾತಾವರಣ ಸೇರಿದಂತೆ ಮೈನಸ್‌ 50 ಡಿಗ್ರಿ ಸೆಲ್ಸಿಯಸ್‌ನಿಂದ ಪ್ಲಸ್‌ 50 ಡಿಗ್ರಿ ಸೆಲ್ಸಿಯಸ್‌ ವರೆಗಿನ ಎಲ್ಲಾ ತಾಪಮಾನಗಳಲ್ಲಿ ಎಲ್‌ಸಿಎಚ್‌ ಕಾರ್ಯನಿರ್ವಹಿಸಬಲ್ಲದು. ಅಲ್ಲದೇ ರಾತ್ರಿ ಸಮಯದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಬಲ್ಲದು.

ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥಯ:
ಎಲ್‌ಸಿಎಚ್‌ಗಳಲ್ಲಿ ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ದಾಳಿ ಮಾಡುವ ಕ್ಷಿಪಣಿಗಳನ್ನು ಅಳವಡಿಸಲಾಗಿದೆ. ಜತೆಗೆ 20 ಎಂಎಂ ಗನ್‌ ಮತ್ತು 70 ಎಂಎಂ ರಾಕೆಟ್‌ಗಳನ್ನು ಹೊಂದಿರಲಿದೆ. ಇದು ಶತ್ರುಗಳ ಯುದ್ಧ ವಿಮಾನಗಳನ್ನು ಹೊಡೆದುರುಳಿಸಬಲ್ಲದು. ಅಲ್ಲದೇ ಅತಿ ಎತ್ತರದ ಪ್ರದೇಶದಲ್ಲಿ ಶತ್ರು ಬಂಕರ್‌ಗಳನ್ನು ಧ್ವಂಸಗೊಳಿಸಬಲ್ಲದು. ಇದನ್ನು ಶತ್ರುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಪೂರ್ಣಪ್ರಮಾಣದಲ್ಲಿ ಬಳಸಬಹುದಾಗಿದೆ.

Advertisement

3,887 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ:
ಜೋಧಪುರದಲ್ಲಿ ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಐಎಎಫ್ ಮುಖ್ಯಸ್ಥ ವಿ.ಆರ್‌.ಚೌಧರಿ ಅವರ ಸಮ್ಮುಖದಲ್ಲಿ ಮೊದಲ ಬ್ಯಾಚ್‌ನ ಎಲ್‌ಸಿಎಚ್‌ಗಳನ್ನುಐಎಎಫ್ ಗೆ ಎಚ್‌ಎಎಲ್‌ ಹಸ್ತಾಂತರಿಸಲಿದೆ.

ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯು(ಸಿಸಿಎಸ್‌), 3,887 ಕೋಟಿ ರೂ. ವೆಚ್ಚದಲ್ಲಿ ದೇಶಿಯವಾಗಿ ನಿರ್ಮಿಸಿರುವ ಲಿಮಿಟೆಡ್‌ ಎಡಿಶನ್‌ನ 15 ಎಲ್‌ಸಿಎಚ್‌ಗಳನ್ನು ತಯಾರಿಸಲು ಅನುಮೋದನೆ ನೀಡಿತು. ಈ ಪೈಕಿ 10 ಎಲ್‌ಸಿಎಚ್‌ಗಳು ಐಎಎಫ್ ಗೆ ಮತ್ತು 5 ಎಲ್‌ಸಿಎಚ್‌ಗಳು ಭಾರತೀಯ ಸೇನೆಗೆ ಪೂರೈಕೆಯಾಗಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next