Advertisement

ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ ವಿಮಾನಗಳ ಹಾರಾಟ!

09:31 PM Sep 08, 2021 | Team Udayavani |

ನವದೆಹಲಿ: ಭಾರತ-ಪಾಕಿಸ್ತಾನ ಗಡಿಗೆ ಕೇವಲ 40 ಕಿ.ಮೀ. ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ, ವಾಯುಪಡೆಯ ವಿಮಾನಗಳದ್ದೇ ಸಂಚಾರ!

Advertisement

ಇದು ಸಾಮಾನ್ಯ ಹೈವೇ ಅಲ್ಲ, ದೇಶದ ಮೊಟ್ಟಮೊದಲ ರಾಷ್ಟ್ರೀಯ “ಹೆದ್ದಾರಿ-ಕಂ-ರನ್‌ವೇ’! ರಾಜಸ್ಥಾನದ ಬಾರ್ಮರ್‌ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಈ ಹೈವೇಯನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಭಾರತೀಯ ವಾಯುಪಡೆ (ಐಎಎಫ್) ವಿಶೇಷ ಆಸ್ಥೆ ವಹಿಸಿ ನಿರ್ಮಿಸಿವೆ.

ಈ ಹೈವೇ-ಕಂ-ರನ್‌ವೇಯ ಉದ್ಘಾಟನೆ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕೂಡ ಈ ವಿಮಾನಗಳಲ್ಲಿ ಈ ಹೈವೇಯಲ್ಲಿ ಸವಾರಿ ಮಾಡಲಿದ್ದಾರೆ.

ಈ ಹಿನ್ನೆಲೆಯಲ್ಲಿ, ಮಂಗಳವಾರ ಈ ಹೈವೇ ಮೇಲೆ ಐಎಎಫ್ ವಿಮಾನಗಳ ತಾಲೀಮು ನಡೆಯಿತು. ಸಿ130, ಎಎನ್‌-32 ವಿಮಾನಗಳು ಲ್ಯಾಂಡಿಂಗ್‌ ಹಾಗೂ ಟೇಕಾಫ್ಗಳನ್ನು ಯಶಸ್ವಿಯಾಗಿ ನಡೆಸಿದವು. ಎಸ್‌.ಯು- 30ಎಂಕೆಐ ವಿಮಾನವು ಕೆಳಮಟ್ಟದಲ್ಲಿ ಹಾರಾಡಿ ಗಮನ ಸೆಳೆಯಿತು.

ಇದನ್ನೂ ಓದಿ :93ಕ್ಕೆ ಕುಸಿದ ಕಿವೀಸ್‌ ಬಾಂಗ್ಲಾಕ್ಕೆ ಟಿ20 ಸರಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next