Advertisement

ಯೋಧರ ಕಳೇಬರವಿದ್ದ ಐಎಎಫ್ ವಿಮಾನದಲ್ಲಿ ದೋಷ; ಪಟ್ನಾದಲ್ಲಿ ಸ್ಥಗಿತ

12:06 PM Feb 16, 2019 | udayavani editorial |

ಪಟ್ನಾ : ಇಂದು ಶನಿವಾರ ಹುತಾತ್ಮ ಸಿಆರ್‌ಪಿಎಫ್ ಯೋಧರ ಪಾರ್ಥಿವ ಶರೀರಗಳನ್ನು ವಿವಿಧೆಡೆಗಳಿಗೆ  ರವಾನಿಸುವ ಹೊಣೆ ಹೊತ್ತ  ಭಾರತೀಯ ವಾಯು ಪಡೆಯ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಅದು ಪಟ್ನಾ ವಿಮಾನ ನಿಲ್ದಾಣದಲ್ಲೇ ಹಲವು ತಾಸುಗಳ ಕಾಲ ನಿಷ್ಕ್ರಿಯವಾಗಿ ಉಳಿಯಬೇಕಾಯಿತು. 

Advertisement

ಕೆಎ 2683 ನಂಬರ್‌ ನ ವಾಯುಪಡೆಯ ಈ ವಿಮಾನ ಎಂಟು ಹುತಾತ್ಮ ಯೋಧರ ಪಾರ್ಥಿವ ಶರೀರಗಳನ್ನು ಹೊತ್ತು ಇಂದು ಬೆಳಗ್ಗೆ  ಪಟ್ನಾ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಇವುಗಳಲ್ಲಿ ಎರಡು ಶವಪಟ್ಟಿಗೆಗಳನ್ನು ಬಿಹಾರಕ್ಕೆ ರವಾನಿಸುವುದಿತ್ತು. ಉಳಿದವುಗಳನ್ನು ದೇಶದ ವಿವಿಧ ಭಾಗಗಳಿಗೆ ಒಯ್ಯುವುದಿತ್ತು.  ಆದರೆ ವಿಮಾನದ ಕ್ಯಾಬಿನ್‌ ಕಂಪಾರ್ಟ್‌ಮೆಂಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಅದು ಹಲವು ತಾಸುಗಳ ಕಾಲ ಸ್ಥಗಿತಗೊಂಡಿತು. 

ವಿಮಾನಲ್ಲಿದ್ದ ಆರು ಕಾಫಿನ್‌ಗಳಲ್ಲಿ ಒಂದು ಜಾರ್ಖಂಡ್‌, ಎರಡು ಪಶ್ಚಿಮ ಬಂಗಾಲ, ಎರಡು ಒಡಿಶಾ ಮತ್ತು ಒಂದು ಅಸ್ಸಾಂ ಗೆ ಸೇರಿದ್ದಾಗಿತ್ತು. ಈ ಕಾಫಿನ್‌ಗಳನ್ನು ಆಯಾ ರಾಜ್ಯಗಳಿಗೆ ಇನ್ನಷ್ಟು ವಿಳಂಬವಿಲ್ಲದೆ, ರವಾನಿಸಲು ಇತರ ಅನೇಕ ವಿಮಾನಗಳನ್ನು ಬಳಸಬೇಕಾಯಿತು.

ಮಧ್ಯಾಹ್ನ 2 ಗಂಟೆಯ ಒಳಗೆ ಎಲ್ಲ ಕಾಫಿನ್‌ ಗಳನ್ನು ಆಯಾ ಸ್ಥಳಕ್ಕೆ ರವಾನಿಸಲಾಯಿತು ಎಂದು ಪಟ್ನಾ ವಿಮಾನ ನಿಲ್ದಾಣ ನಿರ್ದೇಶಕ ರಾಜೇಂದ್ರ ಸಿಂಗ್‌ ತಿಳಿಸಿದರು. ವಿವಿಧ ರಾಜ್ಯಗಳು ಯೋಧರ ಪಾರ್ಥಿವ ಶರೀರಗಳನ್ನು ತರಿಸಿಕೊಳ್ಳವುದಕ್ಕಾಗಿ ತಮ್ಮ ವಿಶೇಷ ವಿಮಾನಗಳನ್ನು ಕಳುಹಿಸಿದ್ದವು ಎಂದವರು ಹೇಳಿದರು. 

ತಾಂತ್ರಿಕ ಸಮಸ್ಯೆಗೆ ಗುರಿಯಾಗಿ ಸ್ಥಗಿತಗೊಂಡ ಐಎಎಫ್ ವಿಮಾನದಲ್ಲಿ ಹುತಾತ್ಮ ಯೋಧರ ಪಾರ್ಥಿವ ಶರೀರಗಳು ಮಾತ್ರವಲ್ಲದೆ  ಅನೇಕ ಹಿರಿಯ ಸಿಆರ್‌ಪಿಎಫ್ ಅಧಿಕಾರಿಗಳು, ಸಿಬಂದಿಗಳು ಕೂಡ ಇದ್ದರು.

Advertisement

ಇಷ್ಟೊಂದು ಸೂಕ್ಷ್ಮ ಸಂವೇದನೆಯ ಕೆಲಸಕ್ಕೆ ಐಎಎಫ್ ತನ್ನ ಅಸಮರ್ಥ ವಿಮಾನವನ್ನು ಏಕಾದರೂ ವ್ಯವಸ್ಥೆ ಮಾಡಿತು ಎಂಬ ಪ್ರಶ್ನೆ ಈಗ ಎಲ್ಲ ವಲಯಗಳಲ್ಲಿ  ಪ್ರತಿಧ್ವನಿಸುತ್ತಿದೆ ಎಂದು ವರದಿಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next