Advertisement

ಕಾಶ್ಮೀರದಲ್ಲಿ ಐಎಎಫ್ ಜೆಟ್‌ ಪತನ; ಇಬ್ಬರ ಸಾವು, ಪೈಲಟ್‌ ನಾಪತ್ತೆ

06:14 AM Feb 27, 2019 | udayavani editorial |

ಶ್ರೀನಗರ : ಭಾರತೀಯ ವಾಯು ಪಡೆಯ ಜೆಟ್‌ ಇಂದು ಬುಧವಾರ ಬೆಳಗ್ಗೆ 10.05ರ ಸುಮಾರಿಗೆ ಜಮ್ಮು ಕಾಶ್ಮೀರದ ಬಡಗಾಂವ್‌ ಜಿಲ್ಲೆಯಲ್ಲಿ ಪತನಗೊಂಡು ಕನಿಷ್ಠ ಇಬ್ಬರು ವ್ಯಕ್ತಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಜೆಟ್‌ ವಿಮಾನ ಬಡಗಾಂವ್‌ ಜಿಲ್ಲೆಯ ಗರೇಂದ್‌ ಕಲಾನ್‌ ಗ್ರಾಮದಲ್ಲಿ ಹೊಲವೊಂದರಲ್ಲಿ ಪತನಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ತುಂಡಾಗಿ ಪತನಗೊಂಡ ಜೆಟ್‌ ಒಡನೆಯೇ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತು. ಜೆಟ್‌ ಪತನಗೊಂಡ ತಾಣದಲ್ಲಿ ಓರ್ವನ ಸುಟ್ಟು ಕರಕಲಾದ ಮೃತ ದೇಹ ಕಂಡು ಬಂದಿದೆ. 

ಮೃತ ವ್ಯಕ್ತಿಯ ಗುರುತು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. ಪೈಲಟ್‌ ಗತಿ ಏನಾಯಿತೆಂಬುದು ಕೂಡ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೆಟ್‌ ಪತನಗೊಂಡ ತಾಣಕ್ಕೆ ಪೊಲೀಸರು ಧಾವಿಸಿದ್ದಾರೆ. ಭಾರತೀಯ ವಾಯು ಪಡೆಯ ತಂತ್ರಜ್ಞರು ಸ್ಥಳಕ್ಕೆ ತೆರಳಿದ್ದಾರೆ ಎಂದು ಬಡಗಾಂವ್‌ ಎಸ್‌ಎಸ್‌ಪಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next