Advertisement

IAF ಕಾಪ್ಟರ್‌ ತುರ್ತು ಭೂ ಸ್ಪರ್ಶ

11:41 PM May 29, 2023 | Team Udayavani |

ಹೊಸದಿಲ್ಲಿ: ಭಾರತೀಯ ವಾಯುಪಡೆಯ ಯುದ್ಧ ಕಾಪ್ಟರ್‌ ಅಪಾಚೆ ಸೋಮವಾರ ಮಧ್ಯಪ್ರದೇಶದ ಭಿಂದ್‌ನ ಬಳಿ ತುರ್ತು ಭೂ ಸ್ಪರ್ಶ ಮಾಡಿದೆ. ಇದರಿಂದ ಯಾವುದೇ ಅವಘಡ ಸಂಭವಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಎಎಚ್‌-64 ಅಪಾಚೆ ಕಾಪ್ಟರ್‌ನಲ್ಲಿ ಸಣ್ಣದೊಂದು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಳಗ್ಗೆ 8.45ಕ್ಕೆ ಭಿಂದ್‌ ಪ್ರದೇಶದಲ್ಲಿ ಕೂಡಲೇ ಮುಂಜಾಗ್ರತ ಕ್ರಮವಾಗಿ ಕಾಪ್ಟರ್‌ಅನ್ನು ತುರ್ತಾಗಿ ಲ್ಯಾಂಡಿಂಗ್‌ ಮಾಡಲಾಗಿದೆ. ಕಾಪ್ಟರ್‌ನಲ್ಲಿದ್ದ ಸಿಬಂದಿ ಸುರಕ್ಷಿತವಾಗಿದ್ದು, ಕಾಪ್ಟರ್‌ಗೂ ಯಾವುದೇ ಹಾನಿ ಸಂಭವಿಸಿಲ್ಲವೆಂದು ಐಎಎಫ್ ಟ್ವೀಟ್‌ಮಾಡಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next