Advertisement

ಸುಳ್ಳಿನ ಜಯಕ್ಕಿಂತ ಸೋಲು ಉತ್ತಮ: ರಿಷಿ ಸುನಾಕ್‌

06:37 PM Aug 11, 2022 | Team Udayavani |

ಲಂಡನ್‌: “ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಗೆಲ್ಲುವುದಕ್ಕಿಂತ, ಸೋಲುವುದೇ ಉತ್ತಮ’… ಹೀಗೆಂದು ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್‌ ಹೇಳಿದ್ದಾರೆ.

Advertisement

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೀಗೆ ಅವರು ತಿಳಿಸಿದ್ದಾರೆ. ಬ್ರಿಟನ್‌ ಪ್ರಧಾನಿ ಚುನಾವಣೆಯ ರೇಸ್‌ನ ಕಡೆಯ ಘಟ್ಟದಲ್ಲಿರುವ ಅವರು, ತಮ್ಮ ಪ್ರಚಾರ ಭಾಷಣಗಳಲ್ಲಿ ತಾವು ಪ್ರಧಾನಿಯಾದರೆ ಬ್ರಿಟನ್‌ನ ಹದಗೆಟ್ಟಿರುವ ಆರ್ಥಿಕತೆಯನ್ನು ಸುಧಾರಣೆಯ ಹಾದಿಗೆ ತರುವುದಾಗಿ ಹೇಳಿದ್ದಾರೆ.

ಬ್ರಿಟನ್‌ನ ಜೀವನ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಇಳಿಸಿ ಬಡವರ ಏಳ್ಗೆಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಈ ಆಶ್ವಾಸನೆಗಳು ಈಡೇರುತ್ತವೆಯೇ ಎಂದು ವಿರೋಧಿಗಳು ಟೀಕಿಸಿರುವುದಕ್ಕೆ ಖಡಕ್‌  ಉತ್ತರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next