Advertisement
“ವನಿತಾ ಐಪಿಎಲ್ ಯಾವತ್ತೇ ಆರಂಭಗೊಳ್ಳಲಿ, ನನ್ನನ್ನು ಯಾವುದೇ ತಂಡಕ್ಕೆ ಆರಿಸಲಿ, ಆದರೆ ವೈಯಕ್ತಿಕವಾಗಿ ನನ್ನ ಆಯ್ಕೆಯೆಂದರೆ ಮುಂಬೈ ಇಂಡಿ ಯನ್ಸ್. ನಾನು ಬಾಲ್ಯದಿಂದಲೂ ಮುಂಬೈ ಇಂಡಿಯನ್ಸ್ ಅಭಿಮಾನಿ. ಇದು ನನ್ನ ನೆಚ್ಚಿನ ಐಪಿಎಲ್ ತಂಡ’ ಎಂಬುದಾಗಿ 21 ವರ್ಷದ ಯಾಸ್ತಿಕಾ ಭಾಟಿಯಾ ಹೇಳಿದರು.
“ಬಾಲ್ಯದಿಂದಲೇ ನಾನು ಕೀಪಿಂಗ್ ಇಷ್ಟ ಪಟ್ಟವಳು. ಮಿಥಾಲಿ ದಿ ಹೇಳಿದಂತೆ ನನಗೆ ಮಾತು ಜಾಸ್ತಿ. ಕ್ರಿಕೆಟ್ ಕುರಿತು ನಿರಂತರ ನಾಲ್ಕು ಗಂಟೆ ಮಾತಾಡಬಲ್ಲೆ. ಕೀಪಿಂಗ್ ನಡೆಸುವಾಗ ನಾನು ಸಹ ಆಟಗಾರ್ತಿಯರೊಂದಿಗೆ ಸದಾ ತಮಾ ಷೆಯಾಗಿ ಮಾತಾಡುತ್ತಿರುತ್ತೇನೆ. ಆಗ ಒಂದು ರೀತಿಯ ಉಲ್ಲಾಸದಾ ಯಕ ವಾತಾವರಣ ಮೂಡುತ್ತದೆ’ ಎಂಬುದಾಗಿ ಯಾಸ್ತಿಕಾ ಸಂದರ್ಶನ ವೊಂದರಲ್ಲಿ ಹೇಳಿದರು. ಭಾರತದ ಪರ ಒಂದು ಟೆಸ್ಟ್, 13 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಿ ಯಾಸ್ತಿಕಾ ಆಡಿದ್ದಾರೆ. ವನಿತಾ ಟಿ20 ಚಾಲೆಂಜ್ ಸರಣಿಯಲ್ಲಿ ದೀಪ್ತಿ ಶರ್ಮ ನಾಯಕತ್ವದ ವೆಲಾಸಿಟಿ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ವರ್ಷದ ವನಿತಾ ವಿಶ್ವಕಪ್ ಪಂದ್ಯಾವಳಿಯಲ್ಲೂ ಆಡಿದ ಹೆಗ್ಗಳಿಕೆ ಇವರದು. ಹಾರ್ದಿಕ್ ಪಾಂಡ್ಯ ಇವರ ನೆಚ್ಚಿನ ಕ್ರಿಕೆಟರ್.