Advertisement

63 ಸಾವಿರ ವೆಚ್ಚ ಮಾಡಿ ಎಲೆಕ್ಷನ್‌ ಗೆದ್ದೆ!

12:05 AM Feb 23, 2023 | Team Udayavani |

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
1978ರಿಂದಲೇ ಸಾರ್ವಜನಿಕ ಜೀವನ ಪ್ರವೇಶ ಆಯಿತಾದರೂ ನಾನು ಮೊದಲ ಬಾರಿ ವಿಧಾನಸಭೆ ಚುನಾವಣೆ ಎದುರಿಸಿದ್ದು 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ.

Advertisement

ಸಮಾಜವಾದಿ ನಾಯಕರ ಒತ್ತಾಸೆ ಯಿಂದ ಮೊದಲ ಬಾರಿಗೆ ನಾನು ಚುನಾವಣೆ ಎದುರಿಸಿದ ಅನುಭವ ಅತ್ಯಂತ ವಿಶೇಷವಾದದ್ದು.

ನನ್ನ ಮೊದಲ ಚುನಾವಣೆಯಲ್ಲಿ ಹಣ ಅಥವಾ ಬೇರೆ ಸಂಪನ್ಮೂಲ ಅಷ್ಟು ಪ್ರಮುಖ ಅನಿಸಲಿಲ್ಲ. ಯಾಕೆಂದರೆ ಆಗ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಏನನ್ನೂ ಬಯಸುತ್ತಿರಲಿಲ್ಲ.

ಪ್ರಚಾರಕ್ಕಾಗಿ ಹೋದರೆ ಜನರು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಕೆಲವು ಮುಖಂಡರು ತಾವೇ ಕೈಯಿಂದ ಅಲ್ಪ ಸ್ವಲ್ಪ ಸಹಾಯ ಮಾಡುತ್ತಿದ್ದರು. ನನ್ನ ಮೊದಲ ಚುನಾವಣೆಯ ಒಟ್ಟಾರೆ ಖರ್ಚು 63 ಸಾವಿರ ರೂ. ಚುನಾವಣೆಯ ಖರ್ಚು, ವೆಚ್ಚದ ಬಗ್ಗೆ ಗಂಭೀರವಾಗಿ ಆಲೋಚಿಸುವ ಸನ್ನಿವೇಶವೇ ಅಂದಿನ ದಿನಗಳಲ್ಲಿ ಇರುತ್ತಿರಲಿಲ್ಲ.ನಮಗೆ ಆಗ ಚುನಾವಣೆ ನಡೆಸಲು ಹಣ ಬೇಕು ಎಂಬ ಪರಿಸ್ಥಿತಿ ಇರಲಿಲ್ಲ. ಜನರನ್ನು ತಲುಪುವುದು ಹೇಗೆ ಎಂಬುದೇ ದೊಡ್ಡ ಕೆಲಸ. ಹಳ್ಳಿಗಳಿಗೆ ಹೋದರೆ ತಡರಾತ್ರಿವರೆಗೂ ಜನರು ಕಾಯುತ್ತಾ ಸ್ಪಂದಿಸುತ್ತಿದ್ದರು. ಚುನಾವಣೆ ಎಂದರೆ ಒಂದು ರೀತಿಯಲ್ಲಿ ಗಂಭೀರತೆಯೂ ಇತ್ತು.

ಖರ್ಚು, ವೆಚ್ಚಕ್ಕಿಂತ ಪ್ರಚಾರದ ಕಡೆ ಅದರಲ್ಲಿಯೂ ಮತದಾರರನ್ನು ತಲಪುವ ರೀತಿ ಹೇಗೆ ಎಂಬುದರ ಬಗ್ಗೆಯೇ ಅಭ್ಯರ್ಥಿಗಳು ಆಲೋಚಿಸುತ್ತಿದ್ದ ದಿನಗಳವು. ಚುನಾವಣೆ ವೆಚ್ಚಕ್ಕಾಗಿ ಅಲ್ಪ ಸ್ವಲ್ಪ ಹಣ ಬೇಕಾದರೆ ಅಭಿಮಾನಿಗಳೇ ಚುನಾವಣ ವೆಚÌಕ್ಕೆಂದು ದೇಣಿಗೆ ಕೊಟ್ಟು ಹೋಗುತ್ತಿದ್ದ ಸಂದರ್ಭವನ್ನೂ ನೋಡಿದ್ದೇನೆ.

Advertisement

ಕಾರ್ಯಕರ್ತರು ಹಾಗೂ ಮುಖಂಡರು ಸ್ವಯಂ ಪ್ರೇರಿತರಾಗಿ ಊಟ-ತಿಂಡಿ ವ್ಯವಸ್ಥೆ ಮಾಡುತ್ತಿದ್ದರು. ಸಭೆ, ಸಮಾರಂಭಗಳಿಗೂ ಹೆಚ್ಚಿನ ಖರ್ಚು ಆಗುತ್ತಿರಲಿಲ್ಲ. ಹೀಗಾಗಿಯೇ ಮೊದಲ ಚುನಾವಣೆಯಲ್ಲಿ ನನ್ನ ವೆಚ್ಚ 63 ಸಾವಿರ ರೂಪಾಯಿ ಮಾತ್ರ. ಅನಂತರ 1985 ರಲ್ಲಿ ಎರಡನೇ ಬಾರಿ ಜನತಾಪಕ್ಷದಿಂದ ಸ್ಪರ್ಧೆ ಮಾಡಿದಾಗಲೂ ಹೆಚ್ಚಿನ ಮೊತ್ತ ಖರ್ಚಾಗಲಿಲ್ಲ.

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇ ಕಾಗಿದೆ. ಕೋಟ್ಯಂತರ ರೂ. ವೆಚ್ಚ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೂ ಅಪಾಯಕಾರಿ. ಎಲ್ಲರೂ ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಧನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಮತದಾರರ ಮುಂದೆ ಹೋಗಬೇಕು. ಮತ ದಾರರು ಇದರ ಮಾನದಂಡದಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು. ಆಗ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಅರ್ಥ ಬರಲು ಸಾಧ್ಯ.

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next