ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ, ಸರ್ವತೋಮುಖ ಅಭಿವೃದ್ಧಿಯೆ ನನ್ನ ಧ್ಯೇಯ, ಧೀನದಲಿತರ ಸೇವೆಯೆ ನನ್ನ ಗುರಿ ಎಂದು ಜಾತ್ಯಾತೀತ ಜನತಾದಳದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮುಖಂಡ ಡಿ. ಜೆ.ನಾಗರಾಜರೆಡ್ಡಿ ಕರೆ ನೀಡಿದರು.
ಮುಂದಿನ ನವಂಬರ್ 8 ರಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪಂಚರತ್ನ ಯೋಜನೆ ಬೆಂಬಲಿಸಲು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ದ್ವಾರಕಾಪಾರ್ಟಿ ಹಾಲ್‌ನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
1999ರ ಚುನಾವಣೆಯಲ್ಲಿ ತಾನು ಸೋತರು, ಈ ಕ್ಷೇತ್ರವನ್ನು ಬಿಡದೆ, ಇಲ್ಲಿನ ಜನರ ಸೇವೆಯನ್ನು ಮಾಡುತ್ತಿದ್ದೇನೆ, ಜನರ ನೋವು ನಲಿವುಗಳಿಗೆ, ಕಷ್ಟಸುಖಗಳಿಗೆ ಸದಾ ಸ್ಪಂದಿಸುತ್ತಿದ್ದೇನೆ, ಅಂದಿನಿಂದ ಇಂದಿನವರೆಗೂ ಅದೆಷ್ಟೋ ಜನ ಈ ಕ್ಷೇತ್ರಕ್ಕೆ ಬಂದರು, ಹೋದರು. ಆದರೆ ನಾನು ಮಾತ್ರ ಇಲ್ಲಿಯೇ ಇದ್ದು ಸೂತರು ಗೆದ್ದರೂ ಜನರ ಸೇವೆಯನ್ನು ಮಾಡುತ್ತಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಎಲ್ಲರೂ ಮತ ನೀಡಿ, ಸಹಕರಿಸಿದರೆ ನಾನು ಕ್ಷೇತ್ರದ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈ ಕ್ಷೇತ್ರದಿಂದ ಒಂದು ನಯಾಪೈಸೆ ತೆಗೆದುಕೊಂಡು ಹೋಗುವವನಲ್ಲ ಎಂದು ತನ್ನ ಇಬ್ಬರ ಮಕ್ಕಳ ಮೇಲೆ ಪ್ರಮಾಣ ಮಾಡಿ ಈ ಹಿಂದೆ ಹೇಳಿದ್ದೆ, ಈಗಲೂ ಸಹ ಅದೇ ಮಾತನ್ನು ಪುನರುಚ್ಚಿಸುತ್ತಿದ್ದೇನೆ ಎಂದರು.
ನ. 8 ರಂದು ಈ ಬಾಗೇಪಲ್ಲಿ ಕ್ಷೇತ್ರಕ್ಕೆ ಪಕ್ಷದ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಬರುತ್ತಿದ್ದು, ಪಂಚರತ್ನ ಯೋಜನೆಯನ್ನು ಬೆಂಬಲಿಸಲು ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಹಸ್ರ ಸಹಸ್ರಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ತಿಳಿಸಿದರು. ತಾಲೂಕು ಯುವ ಜನತಾದಳ ಅಧ್ಯಕ್ಷ ರಾಶ್ಚೇರುವು ಲಕ್ಷ್ಮೀ ನಾರಾಯಣ ಮಾತನಾಡಿದರು.
ಎಂ.ಎಸ್.ರಮೇಶ ಸ್ವಾಗತಿಸಿದರು, ಮುಖಂಡರಾದ ಚೇಳೂರು ಅಪ್ಪಿ, ಮಲ್ಲಪ್ಪ, ವೆಂಕಟರೆಡ್ಡಿ, ಬೈರೆಡ್ಡಿ, ಶ್ರೀರಾಮರೆಡ್ಡಿ ಇತರರಿದ್ದರು.