Advertisement

6 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ: ವೀರಪ್ಪ ಮೊಯ್ಲಿ ವಿಶ್ವಾಸ

02:32 PM Apr 06, 2019 | Vishnu Das |

ನೆಲಮಂಗಲ: ರಾಜ್ಯದಲ್ಲಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಸಂಕಲ್ಪದಿಂದ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು 7 ಸ್ಥಾನಗಳಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಲಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 5 ಕಾಂಗ್ರೆಸ್‌ ಮತ್ತು 2 ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರು ನನ್ನ ಬೆಂಬಲಕ್ಕಿದ್ದಾರೆ. ನಾನು 6 ಲಕ್ಷ ಮತಗಳ ಅಂತ ರದಿಂದ ಗೆಲ್ಲುತ್ತೇನೆಂದು ಕ್ಷೇತ್ರದ ಮೈತ್ರಿ ಅಭ್ಯರ್ಥಿ
ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಮ್ಮಿಕೊಂಡಿದ್ದ ಜಂಟಿ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಷೇತ್ರದ ಜನತೆ ತಮಗೆ ಮತ ನೀಡಿದಲ್ಲಿ ಈಗಷ್ಟೇ ನಗರಸಭೆಯಾಗಿ ಪರಿವರ್ತನೆಗೊಂಡಿರುವ ಪಟ್ಟಣ ವನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕ್ಷೇತ್ರದಲ್ಲಿ ಕುಡಿಯುವ ನೀರು ಸೇರಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ ಪ್ರತಿಯೊಬ್ಬರ ಮನೆ ಮತ್ತು ಹೊಲಗಳಿಗೆ ನೀರು
ಹರಿಸುವ ಪಣ ತೊಟ್ಟಿದ್ದೇನೆ ಎಂದು ಹೇಳಿದರು.

ಈ ಹಿಂದೆಯೇ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈಗಾಗಲೆ ಶೇ.80ರಷ್ಟು ಕಾಮಗಾರಿಯನ್ನು ಸಂಪೂರ್ಣಗೊಳಿಸಲಾಗಿದೆ.
ಕೆ.ಸಿ.ವ್ಯಾಲಿ, ಋಷಭಾವತಿ ಮತ್ತಿತರ ಯೋಜನೆಗ ಳನ್ನು ನೀರಾವರಿಗಾಗಿ ಪ್ರಾರಂಭಿಸಲಾಗಿದ್ದು, ತಾಂತ್ರಿಕ ದೋಷಗಳಿಂದಾಗಿ ಸ್ವಲ್ಪ ಮಟ್ಟಿಗಿನ ಕಾನೂನು ತೊಡಕಾಗಿವೆ. ಹಾಗಾಗಿ, ಯೋಜನೆಗಳ ಪ್ರಗತಿ ಕುಂಠಿತಗೊಂಡಿವೆ. ಶೀಘ್ರವೇ ಕ್ಷೇತ್ರದ ಭೂಮಿ ಚಿನ್ನದ ಭೂಮಿಯಾಗುತ್ತದೆ. ಮೈತ್ರಿ ಸರ್ಕಾರದ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡುತಿದ್ದಾರೆ ಎಂದರು.
ಯುದ್ಧ ಭೀತಿಯಿರಲಿಲ್ಲ: ಪ್ರಧಾನಿ ಮೋದಿ ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರತಿಯೊಬ್ಬ ನಾಗರಿಕರ ಬ್ಯಾಂಕ್‌ ಖಾತೆಗಳಿಗೆ 15 ಲಕ್ಷ ರೂ.
ಹಾಕುವ ಭರವಸೆ ನೀಡಿ 15ರೂ.ಕೂಡ ಹಾಕಲಿಲ್ಲ.

ಜನಧನ್‌ ಖಾತೆಯನ್ನು ತೆರೆಯುವ ಮೂಲಕ 5 ಸಾವಿರ ರೂ. ಅನ್ನು ಖಾತೆಯಲ್ಲಿ ಹಾಕಿದರೆ 15 ಸಾವಿರ ರೂ.ಹಾಕುವ ಪೊಳ್ಳು ಭರವಸೆಯನ್ನು ಸಹ ಈಡೇರಿಸಲಿಲ್ಲ. ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಯೋಧರನ್ನು ರಸ್ತೆ ಮೂಲಕ ಸ್ಥಳಾಂತರಿಸಿ ಬಾಂಬ್‌ ದಾಳಿಯಲ್ಲಿ ಯೋಧರು ಹತ್ಯೆಗೀಡಾಗುವಂತೆ ಮಾಡಿದರು. ಮೋದಿ ಅಧಿಕಾರಕ್ಕೆ ಬಂದಾಗಿನಿಂದ
ದೇಶದಲ್ಲಿ ಉಗ್ರವಾದ ಹೆಚ್ಚಾಗಿದೆ. ಬಿಜೆಪಿಯ ವಾಜಪೇಯಿ ಅವಧಿಯಲ್ಲಿ ಕಾರ್ಗಿಲ್‌, ಇಂದು ಮೋದಿ ಅವಧಿಯಲ್ಲಿ ಪುಲ್ವಾಮ ದಾಳಿ ಸಂಭವಿಸಿದೆ.ಕಾಂಗ್ರೆಸ್‌ ಅವಧಿಯಲ್ಲಿ ಯುದ್ಧದ ಭೀತಿಯೇ ಇರಲಿಲ್ಲ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಏನು ಮಾಡಿದ್ದಾರೆ?: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕರಾಗಿದ್ದಾಗ ಮತ್ತು ಸಚಿವ ರಾಗಿದ್ದ ವೇಳೆ ಏನು ಕೊಡುಗೆ ನೀಡಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಸಾಕಷ್ಟು ಸಾಕ್ಷಿಕಲ್ಲು ಗಳನ್ನು
ನೆಟ್ಟಿದ್ದೇನೆಂದು ತಿಳಿಸಿದರು.

Advertisement

ಮೊಯ್ಲಿ ಬೆಂಬಲಿಸಿ: ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಮಾತನಾಡಿ, ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ಅದರ ಬದಲಿಗೆ ಪದವಿ ಮತ್ತು ಸ್ನಾತಕೋತರ ಪದ
ವೀಧರರಿಗೆ ಪಕೋಡ ಮಾರುವಂತೆ ಸಲಹೆ ನೀಡಿ ಅಪಮಾನಿಸಿದ್ದಾರೆ. ಆದ್ದರಿಂದ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ಎತ್ತಿನಹೊಳೆ ಯೋಜನೆಯ ಹರಿಕಾರ ಮೊಯ್ಲಿ ಅವರನ್ನು ಬೆಂಬಲಿಸಬೇಕೆಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಮಾಜಿ ಸಚಿವ ಅಂಜನಮೂರ್ತಿ, ಜೆಡಿಎಸ್‌ ತಾಲೂಕು ಅಧ್ಯಕ್ಷ ಎನ್‌.ಪಿ.ಹೇಮಂತ್‌
ಕುಮಾರ್‌, ಎನ್‌ಪಿಎ ಮಾಜಿಧ್ಯಕ್ಷ ಸಿ.ಆರ್‌.ಗೌಡ, ಮೈತ್ರಿ ಪಕ್ಷಗಳ ಮುಖಂಡರಾದ ಮಿಲಿó ಮೂರ್ತಿ, ಎ.ಪಿಳ್ಳಪ್ಪ, ಗೋವೆನಹಳ್ಳಿ ಶಿವಣ್ಣ, ಲಕ್ಷ್ಮೀನಾರಾ ಯಣ್‌, ಚೆಲುವರಾಜು, ಸೈಯದ್‌ ಖಲೀಮುಲ್ಲಾ,
ಸಿದ್ಧರಾಮಯ್ಯ, ಹೊಸಹಳ್ಳಿ ಸಿ.ಎಂ.ಗೌಡ್ರು, ಅರುಣ್‌ ಕುಮಾರ್‌, ಸೀತಾರಾಮು, ನರಸಿಂಹಮೂರ್ತಿ, ಬೂದಿ ಹಾಳ್‌ ಗೋವಿಂದರಾಜು, ಉಮೇಶ್‌, ಸೋಲದೇವನಳ್ಳಿ ವೆಂಕಟೇ ಶ್‌, ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next