ಸಂಗ್ರೂರ್ : ಭಗತ್ ಸಿಂಗ್ ಅವರ ಗ್ರಾಮ ಖಟ್ಕರ್‌ಕಾಲನ್‌ನಲ್ಲಿ ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ, ರಾಜಭವನದಲ್ಲಿ ಅಲ್ಲ ಎಂದು ಎಎಪಿಯ ಭಗವಂತ್ ಮಾನ್ ಗುರುವಾರ ಘೋಷಿಸಿದ್ದಾರೆ.
ಇದೆ ಮೊದಲ ಬಾರಿಗೆ ಭರ್ಜರಿ ಬಹುಮತ ಪಡೆದು ಪಂಜಾಬ್ ನಲ್ಲಿ ಆಡಳಿತ ಹಿಡಿಯುತ್ತಿರುವ ಅಪ್ ಈ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ. ಭಾವನಾತ್ಮಕ ಬಂಧ ಹೊಂದಿರುವ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ಸಲ್ಲಿಸುವ ಮೂಲಕ ದೇಶ ಭಕ್ತಿ ಮತ್ತು ಯುವ ಜನತೆಯಲ್ಲಿ ಹೊಸ ಉತ್ಸಾಹ ತುಂಬಲು ಭಗವಂತ್ ಮಾನ್ ಮುಂದಾಗಿದ್ದಾರೆ.
ಪಕ್ಷ ಭರ್ಜರಿ ಬಹುಮತದತ್ತ ಸಾಗಿದ ಬಳಿಕ ಸಂಗ್ರೂರ್ ನಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾನ್, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಸ್ವಾಗತಿಸುತ್ತಿರುವಾಗ ಅವರ ತಾಯಿ ಹರ್ಪಾಲ್ ಕೌರ್ ಅವರನ್ನು ಅಪ್ಪಿಕೊಂಡು ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡರು.
ಧುರಿಯಿಂದ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ 58,206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.117 ಸ್ಥಾನಗಳ ಪೈಕಿ ಪಂಜಾಬ್ ನಲ್ಲಿ 92 ಸ್ಥಾನಗಳಲ್ಲಿ ಆಪ್ ಮುನ್ನಡೆ ಸಾಧಿಸಿ ಐತಿಹಾಸಿಕ ವಿಜಯೋತ್ಸವ ಆಚರಿಸುತ್ತಿದೆ.
Related Articles
ಕಚೇರಿಗಳಲ್ಲಿ ಶಹೀದ್ ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರ ಮಾತ್ರ ಇರುತ್ತದೆ ಎಂದು ಮಾನ್ ಹೇಳಿದ್ದಾರೆ. ಶೀಘ್ರದಲ್ಲಿ ಪ್ರಮಾಣ ವಚನ ಸ್ವೀಕಾರ ದಿನಾಂಕ ಘೋಷಿಸುವುದಾಗಿ ತಿಳಿಸಿದ್ದಾರೆ.
Advertisement– Sukhbir Singh Badal (@sukhbir_singh_badal) 10 Mar 2022