ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಅಡಿಕೆ ತೋಟ ಮಾರಿಯಾದರೂ ಒಂದು ಕೋಟಿ ನೀಡುವುದಾಗಿ ಅಭಿಮಾನಿಯೊಬ್ಬರು ಅಫರ್ ನೀಡಿದ್ದಾರೆ.
ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಬಾಲಕೃಷ್ಣ ಎಂಬವರು ಈ ಬಗ್ಗೆ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಆಫರ್ ನೀಡಿದ್ದಾರೆ. ಮೂರು ಎಕರೆ ಅಡಿಕೆ ತೋಟ ಮಾರಿ ಹಣ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ:‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ
ಸಿದ್ದರಾಮಯ್ಯ ಅವರ ಅಭಿಮಾನಿಯಾಗಿರುವ ಅವರು ಕೆಂಪನ ಹಳ್ಳಿಯಲ್ಲಿರುವ ಅಡಿಕೆ ತೋಟ ಮಾರಲು ಸಿದ್ದವಾಗಿದ್ದಾರೆ. ಇದಕ್ಕೆ ಇಡೀ ಕುಟುಂಬದ ಒಪ್ಪಿಗೆ ಸಿಕ್ಕಿದೆ. ಸಿದ್ದರಾಮಯ್ಯ ಸ್ಪರ್ಧಿಸಿದರೆ ಒಂದು ಕೋಟಿಗೂ ಅಧಿಕ ಹಣ ನೀಡಿದರೂ ಯಾವುದೇ ತಕರಾರಿಲ್ಲ ಎಂದು ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ ಎಂದು ಬಾಲಕೃಷ್ಣ ಹೇಳಿದ್ದಾರೆ.