Advertisement

ಬಿಜೆಪಿ ಸೇರಲು ಹಣದ ಆಮಿಷವಿತ್ತು: ಶ್ರೀಮಂತ ಪಾಟೀಲ್‌

10:38 PM Sep 11, 2021 | Team Udayavani |

ಕಾಗವಾಡ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವಾಗ ಹಣದ ಆಮಿಷ ಬಂದಿತ್ತು. ಆದರೆ ಹಣಕ್ಕೆ ಬೇಡಿಕೆ ಇಡದೆ ಕ್ಷೇತ್ರ ಹಾಗೂ ಜನರ ಸೇವೆ ಮಾಡಲು ಒಳ್ಳೆಯ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಹೇಳಿದ್ದಾರೆ.

Advertisement

ಶನಿವಾರ ಐನಾಪುರ ಪಟ್ಟಣದಲ್ಲಿ ಒಂದು ಕೋಟಿ ರೂ. ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದಾಗ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಸೇರುವಾಗ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದರಿಂದ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈಗ  ಕೈಬಿಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತೆ ಸಚಿವ ಸ್ಥಾನ ನೀಡುವ  ಭರವಸೆ ವರಿಷ್ಠರಿಂದ ಸಿಕ್ಕಿದೆ ಎಂದರು.

ಕೃಷಿ ಇಲಾಖೆ ಬಯಕೆ:

20 ವರ್ಷಗಳಿಂದ ಒಕ್ಕಲುತನ ಮಾಡುತ್ತಾ ಬಂದಿದ್ದು, ಕೃಷಿ ಪದವೀಧರನೂ ಆಗಿದ್ದೇನೆ. ನನಗೆ ಆಗಲೇ ಕೃಷಿ ಇಲಾಖೆ ಕೊಡಬೇಕಾಗಿತ್ತು. ಆದರೆ ಸಿಕ್ಕಿದ್ದು ಜವಳಿ ಹಾಗೂ ಅಲ್ಪಸಂಖ್ಯಾಕರ ಖಾತೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಬೊಮ್ಮಾಯಿ ಅವರು ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಕೃಷಿ ಖಾತೆ ಕೊಟ್ಟರೆ ಚೆನ್ನಾಗಿ ನಿಭಾಯಿಸುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next