ಮೈಸೂರು: “ನನಗೆ ಬಹಳ ದಿನ ಬದುಕಲು ಇಷ್ಟ. ಜನ ಸೇವೆ ಮಾಡಲು ಹೆಚ್ಚು ವರ್ಷ ಬದುಕಬೇಕೆಂಬ ಆಸೆಯಿದೆ. ನನಗೆ 76 ವರ್ಷ ವಯಸ್ಸಾಗಿದೆ. ಇನ್ನು ಎಷ್ಟು ವರ್ಷ ಬದುಕುತ್ತೇನೋ ಗೊತ್ತಿಲ್ಲ…” ಹೀಗೆಂದವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ.
ಮೈಸೂರಿನಲ್ಲಿ ಡಾ.ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಡಯಾಬಿಟಿಸ್ ಬಂದಿದೆ. ಅದು 10 ವರ್ಷ ಆಯಸ್ಸು ಕಡಿಮೆ ಮಾಡುತ್ತಂತೆ. ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡಿದರೆ ಆರೋಗ್ಯ ವೃದ್ಧಿ ಆಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಇವೆಲ್ಲ ಶುರು ಮಾಡಬೇಕು ಎಂದರು.
ಇದನ್ನೂ ಓದಿ:ಟಿ20 ವಿಶ್ವಕಪ್ 2022 ರ ಅತ್ಯಂತ ಮೌಲ್ಯಯುತ ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು
ಕೋವಿಡ್ ಬಂದ ಮೇಲೆ ಜನರಿಗೆ ತೊಂದರೆಯಾಗಿದೆ. ಆದರೆ ಆಸ್ಪತ್ರೆಯವರಿಗೆ ಆರ್ಥಿಕವಾಗಿ ಒಳ್ಳೆಯದಾಗಿದೆ. ಆಸ್ಪತ್ರೆ ಮಾರಲು ಹೊರಟಿದ್ದವರೆಲ್ಲ ಉಳಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹಾಸ್ಯಚಟಾಕಿ ಹಾರಿಸಿದರು.