Advertisement

ಮಿಸ್ ವರ್ಲ್ಡ್ ಭಾರತಕ್ಕೆ ತರುವ ಆಸೆ ನನ್ನದು: ಸಿನಿ ಶೆಟ್ಟಿ

03:08 PM Jul 28, 2022 | Team Udayavani |

2022ರ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಬೆಡಗಿ ಸಿನಿ ಶೆಟ್ಟಿ. ಮೂಲತಃ ಮಂಗಳೂರಿನವರಾದರೂ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಫೆಮಿನಾ ಮಿಸ್ ಇಂಡಿಯಾ ಪೇಜೆಂಟಿನ್ ವಿಜೇತರಾದ ನಂತರ ತಮ್ಮ ತವರು ಕರ್ನಾಟಕಕ್ಕೆ ಮರಳಿರುವ ಸಿನಿ ಶೆಟ್ಟಿ ಜೊತೆ ಉದಯವಾಣಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.

Advertisement

ಮಿಸ್‌ ಇಂಡಿಯಾ ಸೆಳೆತ ಹೇಗೆ ?

14 ನೇ ವಯಸ್ಸಿಗೆ ಭರತ ನಾಟ್ಯದಲ್ಲಿ ರಂಗಪ್ರವೇಶ ಮಾಡಿದವಳು ನಾನು. ನಂತರ ನಾನು ಮಾಡೆಲಿಂಗ್‌ ಕಡೆಗೂ ಗಮನ ಹರಿಸಿದ್ದೆ. ಇದೇ ನನ್ನ ಪಾಲಿಗೆ ಮಿಸ್‌ ಇಂಡಿಯಾ ವೇದಿಕೆಗೆ ದಾರಿಯಾಗಿತ್ತು. ಒಂದು ಚಾನ್ಸ್‌ ನೋಡೊಣ ಎಂದು ಆಡಿಷನ್ಸ್‌ ನೀಡಿದೆ. ಆದರೆ ನನಗೆ ಸ್ಪರ್ಧೆಗೆ ಆಯ್ಕೆಯಾಗಿದ್ದೀರಾ, ಇನ್ನಷ್ಟು ತಯಾರಿ ಬೇಕು ಅಂದಾಗ ನನ್ನ ಖುಷಿಗೆ ಪಾರವೇ ಇಲ್ಲದಂತಾಯ್ತು. ಅಲ್ಲಿಂದ ನನ್ನ 40 ದಿನಗಳ ಫೆಮಿನಾ ಮಿಸ್‌ ಇಂಡಿಯಾ ಜರ್ನಿ ಶುರುವಾಗಿದು

ಮಿಸ್‌ ಇಂಡಿಯಾ ತಯಾರಿ ಹಾಗೂ ಅನುಭವ ಹೇಗಿತ್ತು?

ಮಿಸ್‌ ಇಂಡಿಯಾ ತಯಾರಿ ಎನ್ನುವುದು ವರ್ಷಗಳ ಲೆಕ್ಕಾಚಾರದಲ್ಲಿ ಮಾಡಿದ ಪ್ಲಾನ್‌ ಅಲ್ಲ. ಸತತ ಆರು ತಿಂಗಳಿಂದ ಈ ಸ್ಪರ್ಧೆಗೆ ಶ್ರಮಿಸಿದ್ದೇನೆ. ಆಡಿಷನ್ಸ್‌ ಆಗಿ ಸ್ಪರ್ಧೆಗೆ ಎಂಟ್ರಿಯಾದಾಗಿನಿಂದ ಇಲ್ಲಿಯವರೆಗೂ ಒಂದೊಂದು ಬಗೆಯ ಕಲಿಕೆ ನನ್ನದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 30 ಹುಡುಗಿಯರೂ ಅದ್ಭುತ ಪ್ರತಿಭೆಗಳು. ಸಂಪೂರ್ಣ ಆತ್ಮವಿಶ್ವಾಸದಿಂದ ಪ್ರೇಕ್ಷಕರ ಎದುರಿಗೆ ನಿಲ್ಲುವ, ಅಷ್ಟೇ ಧೈರ್ಯದಿಂದ ಮಾತನಾಡುವುದನ್ನು ಕಲಿತೆ. ಎಲ್ಲಕ್ಕಿಂತ ಮೊದಲು ನಾನು ಎಲ್ಲವನ್ನೂ ತೆರೆದ ಕಣ್ಣಿನಿಂದ ಗಮನಿಸಿ, ಮುಕ್ತಮನಸ್ಸಿನಿಂದ ಕಲಿತೆ.

Advertisement

ಚಿತ್ರರಂಗಕ್ಕೆ ಬರುವ ಯೋಚನೆ ಇದೆಯೇ?

ಮೊದಲಿನಿಂದಲೂ ಫ್ಯಾಷನ್‌ ಮತ್ತು ಮಾಡೆಲಿಂಗ್‌ ಕ್ಷೇತ್ರದಲಿ ಎತ್ತರಕ್ಕೆ ಬೆಳೆಯುವ ಕನಸು ಹೊಂದಿದ್ದೆ. ಇನ್ನು ನಟನೆಯ ಕುರಿತು ಅಗಾಧ ಆಸಕ್ತಿ ನನ್ನಲ್ಲಿದೆ. ಮುಂದಿನ ದಿನಗಳಲ್ಲಿ ಒಂದು ಬ್ಲಾಕ್‌ ಬಾಸ್ಟರ್‌ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡುವ ಆಸೆ ಹೊಂದಿದ್ದೇನೆ. ಮನರಂಜನಾ ಜಗತ್ತಿನಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳುವ ಕನಸು ನನಗಿದೆ. ಬಾಲಿವುಡ್‌ ಅಥವಾ ಸ್ಯಾಂಡಲ್‌ವುಡ್‌ ಅನ್ನುವ ಭೇದವಿಲ್ಲ. ಯಾವುದೇ ಚಿತ್ರರಂಗದಿಂದ ಒಂದು ದೊಡ್ಡ ಅವಕಾಶ, ನಟನೆಗೆ ಉತ್ತಮ ಪಾತ್ರ ಸಿಕ್ಕರೆ ಅಭಿನಯಿಸುವೆ.

ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಆಸಕ್ತಿ ಇದೆಯೇ?

ಮಿಸ್‌ ಇಂಡಿಯಾ ಪಟ್ಟ ಒಂದು ದೊಡ್ಡ ಜವಾಬ್ದಾರಿ. ಇನ್ನು ಮುಂದಿನ ದಿನಗಳಲ್ಲಿ ಸಮಾಜದ ಪರವಾಗಿಯೂ ನಾನು ಕೆಲಸ ಮಾಡಲು ಬಯಸುತ್ತೇನೆ. ಮಹಿಳಾ ಸಬಲೀಕರಣ, ಮಹಿಳೆಯರ ಮೂಲಭೂತ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕೆಲಸಗಳಲ್ಲಿ ತೊಡಗುವ ಆಸೆ ಇದೆ. ಇತ್ತೀಚೆಗೆ ರಾಜ್ಯದ ಮಾನ್ಯ ಮುಖ್ಯಂತ್ರಿಗಳನ್ನು ಭೇಟಿಯಾದ ಸಂರ್ಭದಲ್ಲಿ ಈ ವಿಷಯ ಕುರಿತು ಚರ್ಚಿಸಿದ್ದು, ಮಹಿಳಾ ಸಬಲೀಕರಣ ಯೋಜನೆಗಳ ಭಾಗವಾಗುವ ಆಸೆಯನ್ನು ವ್ಯಕ್ತಪಡಿಸಿದ್ದೇನೆ.

ಮುಂದಿನ ನಿಮ್ಮ ಕನಸು?

ಸದ್ಯಕ್ಕೆ ನನ್ನ ಪ್ರಮುಖ ಆದ್ಯತೆ ಹಾಗೂ ದೊಡ್ಡ ಕನಸು “ಮಿಸ್‌ ವರ್ಲ್ಡ್’ ಸ್ಪರ್ಧೆ. ಮಿಸ್‌ ಇಂಡಿಯಾದಿಂದಾಗಿ ದೊರೆತ ಉತ್ತಮ ಅವಕಾಶ ಇದು. ಈ ನಾಡಿನ ಮಗಳಾಗಿ ಇಲ್ಲಿಯ ಸಂಸ್ಕೃತಿ, ನಮ್ಮ ದೇಶದ ಸಾಂಸðತಿಕ ಮಹತ್ವವನ್ನು ಜಗತ್ತಿನಾದ್ಯಂತ ಪಸರಿಸುವ ಆಸೆ ನನ್ನದು. ಮಿಸ್‌ ವರ್ಲ್ಡ್ನಲ್ಲಿ ಭಾಗವಹಿಸಿ, ಆ ಕೀರಿಟವನ್ನು ಮತ್ತೆ ಭಾರತಕ್ಕೆ ತರುವ ಮಹದಾಸೆ ನನ್ನದು

ವಾಣಿ ಭಟ್ಟ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next