Advertisement
ಮಿಸ್ ಇಂಡಿಯಾ ಸೆಳೆತ ಹೇಗೆ ?
Related Articles
Advertisement
ಚಿತ್ರರಂಗಕ್ಕೆ ಬರುವ ಯೋಚನೆ ಇದೆಯೇ?
ಮೊದಲಿನಿಂದಲೂ ಫ್ಯಾಷನ್ ಮತ್ತು ಮಾಡೆಲಿಂಗ್ ಕ್ಷೇತ್ರದಲಿ ಎತ್ತರಕ್ಕೆ ಬೆಳೆಯುವ ಕನಸು ಹೊಂದಿದ್ದೆ. ಇನ್ನು ನಟನೆಯ ಕುರಿತು ಅಗಾಧ ಆಸಕ್ತಿ ನನ್ನಲ್ಲಿದೆ. ಮುಂದಿನ ದಿನಗಳಲ್ಲಿ ಒಂದು ಬ್ಲಾಕ್ ಬಾಸ್ಟರ್ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡುವ ಆಸೆ ಹೊಂದಿದ್ದೇನೆ. ಮನರಂಜನಾ ಜಗತ್ತಿನಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳುವ ಕನಸು ನನಗಿದೆ. ಬಾಲಿವುಡ್ ಅಥವಾ ಸ್ಯಾಂಡಲ್‌ವುಡ್ ಅನ್ನುವ ಭೇದವಿಲ್ಲ. ಯಾವುದೇ ಚಿತ್ರರಂಗದಿಂದ ಒಂದು ದೊಡ್ಡ ಅವಕಾಶ, ನಟನೆಗೆ ಉತ್ತಮ ಪಾತ್ರ ಸಿಕ್ಕರೆ ಅಭಿನಯಿಸುವೆ.
ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಆಸಕ್ತಿ ಇದೆಯೇ?
ಮಿಸ್ ಇಂಡಿಯಾ ಪಟ್ಟ ಒಂದು ದೊಡ್ಡ ಜವಾಬ್ದಾರಿ. ಇನ್ನು ಮುಂದಿನ ದಿನಗಳಲ್ಲಿ ಸಮಾಜದ ಪರವಾಗಿಯೂ ನಾನು ಕೆಲಸ ಮಾಡಲು ಬಯಸುತ್ತೇನೆ. ಮಹಿಳಾ ಸಬಲೀಕರಣ, ಮಹಿಳೆಯರ ಮೂಲಭೂತ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕೆಲಸಗಳಲ್ಲಿ ತೊಡಗುವ ಆಸೆ ಇದೆ. ಇತ್ತೀಚೆಗೆ ರಾಜ್ಯದ ಮಾನ್ಯ ಮುಖ್ಯಂತ್ರಿಗಳನ್ನು ಭೇಟಿಯಾದ ಸಂರ್ಭದಲ್ಲಿ ಈ ವಿಷಯ ಕುರಿತು ಚರ್ಚಿಸಿದ್ದು, ಮಹಿಳಾ ಸಬಲೀಕರಣ ಯೋಜನೆಗಳ ಭಾಗವಾಗುವ ಆಸೆಯನ್ನು ವ್ಯಕ್ತಪಡಿಸಿದ್ದೇನೆ.
ಮುಂದಿನ ನಿಮ್ಮ ಕನಸು?
ಸದ್ಯಕ್ಕೆ ನನ್ನ ಪ್ರಮುಖ ಆದ್ಯತೆ ಹಾಗೂ ದೊಡ್ಡ ಕನಸು “ಮಿಸ್ ವರ್ಲ್ಡ್’ ಸ್ಪರ್ಧೆ. ಮಿಸ್ ಇಂಡಿಯಾದಿಂದಾಗಿ ದೊರೆತ ಉತ್ತಮ ಅವಕಾಶ ಇದು. ಈ ನಾಡಿನ ಮಗಳಾಗಿ ಇಲ್ಲಿಯ ಸಂಸ್ಕೃತಿ, ನಮ್ಮ ದೇಶದ ಸಾಂಸðತಿಕ ಮಹತ್ವವನ್ನು ಜಗತ್ತಿನಾದ್ಯಂತ ಪಸರಿಸುವ ಆಸೆ ನನ್ನದು. ಮಿಸ್ ವರ್ಲ್ಡ್ನಲ್ಲಿ ಭಾಗವಹಿಸಿ, ಆ ಕೀರಿಟವನ್ನು ಮತ್ತೆ ಭಾರತಕ್ಕೆ ತರುವ ಮಹದಾಸೆ ನನ್ನದು
ವಾಣಿ ಭಟ್ಟ