ತಿಪಟೂರು: ಇಲ್ಲಿನ ಜನಸ್ತೋಮ ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸಚಿವ ಬಿ.ಸಿ.ನಾಗೇಶ್ ಬದಲು ನಾನೇ ತಿಪಟೂರು ಕ್ಷೇತ್ರದಿಂದ ಸ್ಪರ್ಧಿಸಬೇಕಾಗಬಹುದೇನೋ ಎಂದು ಬಿ.ವೈ.ವಿಜಯೇಂದ್ರ ಹೇಳಿದ ಪ್ರಸಂಗ ನಡೆಯಿತು.
Advertisement
ನಗರದ ಶ್ರೀ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ರಾಜ್ಯಮಟ್ಟದ ಶ್ರೀ ಗುರುಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಜನರು “ವಿಜಯೇಂದ್ರ, ವಿಜಯೇಂದ್ರ, ಯಡಿಯೂರಪ್ಪ’ ಎಂದು ಕೂಗುತ್ತಿದ್ದರು. ಇದನ್ನು ಗಮನಿಸಿದ ವಿಜಯೇಂದ್ರ ಅವರು ತಮಾಷೆಯಾಗಿ ಈ ರೀತಿ ಹೇಳಿದರು.