Advertisement

ಕಣ್ಣುಗಳಲ್ಲಿನ ಮಿಂಚು: ಅಪ್ಪು ‘ಗಂಧದಗುಡಿ’ಟೀಸರ್ ಬಗ್ಗೆ ಯಶ್

04:35 PM Dec 06, 2021 | Team Udayavani |

ಬೆಂಗಳೂರು : ಮರೆಯಾದ ಪವರ್ ಸ್ಟಾರ್ ನಿತ್ಯವೂ ನೆನಪಾಗುತ್ತಿದ್ದು, ಅವರ ಕನಸಿನ ಗಂಧದಗುಡಿ ಚಿತ್ರದ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು ಟ್ರೆಂಡಿಂಗ್  ಆಗಿದೆ , ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಟೀಸರ್ ಕುರಿತು ಟ್ವೀಟ್ ಮಾಡಿರುವ ಯಶ್, ”ನೀವು ಈ ಯೋಜನೆಯ ಬಗ್ಗೆ ಮಾತನಾಡಿದಾಗಲೆಲ್ಲಾ ನಿಮ್ಮ ಕಣ್ಣುಗಳಲ್ಲಿನ ಮಿಂಚು ನನಗೆ ನೆನಪಿದೆ. ಈ ಚಿತ್ರದ ಬಗ್ಗೆ ನೀವು ಹೊಂದಿರುವ ಉತ್ಸಾಹ, ಉತ್ಸಾಹವು ನಿಮ್ಮ ಹೃದಯಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಗಂಧದಗುಡಿಯನ್ನು ಕಣ್ಣಾರೆ ತೋರಿಸಿದ್ದಕ್ಕೆ ಧನ್ಯವಾದಗಳು ಅಪ್ಪು ಸರ್. ಇದು ನಿಜವಾಗಿಯೂ ಸ್ವರ್ಗವಾಗಿದೆ.” ಎಂದು ಬರೆದಿದ್ದಾರೆ.

ಟೀಸರ್ ಬಿಡುಗಡೆಯಾಗಿ 6  ಗಂಟೆಗಳ ಒಳಗೆ 11 ಲಕ್ಷಕ್ಕಿಂತ ಹೆಚ್ಚು (1,170,434) ಜನರಿಂದ ವೀಕ್ಷಣೆಗೊಳಗಾಗಿದೆ.

ಕನ್ನಡ ನಾಡಿನ ಸೊಬಗನ್ನು ಕಣ್ಣಿಗೆ ಹಬ್ಬವಾಗಿಸಿ ಕೊಟ್ಟಿರುವ ಟೀಸರ್ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ.

ಗಂಧದ ಗುಡಿ ವರನಟ ಡಾ.ರಾಜ್ ಕುಮಾರ್ ಮತ್ತು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರು ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಹಿಟ್ ಚಿತ್ರವಾಗಿತ್ತು. ಗಂಧದ ಗುಡಿ ಭಾಗ 2 ರಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next