Advertisement
ಅಯ್ಯೋ ನನಗೆ ಶೀತ ಆದಂಗಿದೆಯಲ್ಲ! ಅನ್ನುವಷ್ಟರಲ್ಲಿ ಕೆಮ್ಮು ಶುರುವಾಯ್ತು. ಮೈಯೆಲ್ಲ ಭಾರ , ಹಣೆ ಒತ್ತಿ ನೋಡಿದರೆ ಬಿಸಿ, ಆತಂಕಕ್ಕೇನು ಬರವಿಲ್ಲ, ಬಾಯಿ ಬಿಟ್ಟು ಹೇಳುವುದೇನು? ಮನಸಲ್ಲಿ ಆ ಪ್ರಶ್ನೆ ಥಟ್ ಅಂತ ಬಂದೇ ಬಿಟ್ಟಿತು, ಇದು ಕೊರೊನಾ ನಾ?!
Related Articles
Advertisement
ಮುಪ್ಪನ್ನು ಕಂಡು ಮೊಮ್ಮಕ್ಕಳ ಜತೆ ಆಡುವ ಆಸೆಯನ್ನು ಇಟ್ಟುಕೊಂಡವರು, ಸುಖವಾಗಿ ಸಂಸಾರ ನಡೆಸುವ ನಿಟ್ಟಿನಲ್ಲಿರುವ ಪತಿ- ಪತ್ನಿ, ಜೀವನದÇÉೇನೋ ಸಾಧಿಸಬೇಕೆಂಬ ದೃಢ ನಿರ್ಧಾರ ಮಾಡಿಕೊಂಡ ಯುವಕರು, ಜೀವನವೇ ಗೊತ್ತಿಲ್ಲದ ಎಳೆಯರು ಹೀಗೆ ಎಲ್ಲರೂ ನಮ್ಮನ್ನು ಅಗಲತೊಡಗಿದ್ದಾರೆ.
ಹಾಗಾದರೆ ನಾನೇನು ಮಾಡಬೇಕು? ನಾನು ಈ ಭೂಮಿಯ ಮೇಲೆ ಜನಿಸಿದ ಒಂದು ಜೀವ. ನನಗೂ ಒಂದು ಕರ್ತವ್ಯವಿದೆಯಲ್ಲವೇ? ಮೊಟ್ಟಮೊದಲು ಈ ಕೊರೊನಾ ಎಂಬ ಯುದ್ಧದಲ್ಲಿ ನಾನು ಶಸ್ತ್ರ ಸಜ್ಜಿತಳಾಗಬೇಕು. ನನ್ನ ಶಕ್ತಿಯ ಮೇಲೆ ನನಗೆ ದೃಢ ವಿಶ್ವಾಸವಿರಬೇಕು. ಕೊರೊನಾ ಎಂಬುದು ಕೇವಲ ದೇಶದ ಅಥವಾ ಸರಕಾರದ ಜವಾಬ್ದಾರಿಯಲ್ಲ. ಇದು ನನಗೆ ಹಾಗೂ ನನ್ನ ಸುತ್ತಮುತ್ತಲಿನವರಿಗೆ ಬಾರದ ಹಾಗೆ ನೋಡಿಕೊಳ್ಳುವುದು ನನ್ನ ಪ್ರಮುಖ ಜವಾಬ್ದಾರಿಯಾಗಿದೆ.
ಕೊರೊನಾ ಬಂದರೆ ವೈದ್ಯರು ಔಷಧೋಪಚಾರ ಮಾಡಿ, ನಾವು ಹೇಗೆ ಇರಬೇಕು ಎಂದೆಲ್ಲ ವಿವರಿಸು ತ್ತಾರೆ. ಕೆಲವರು ಇದರಿಂದ ಗುಣ ಮುಖರಾದರೆ, ಹಲವರು ನರಳಿ- ನರಳಿ ಸಾಯುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇವುಗಳನ್ನು ಎಲ್ಲೆಂದರಲ್ಲಿ ಕೇಳುತ್ತಿದ್ದೇವೆ. ಆದರೆ ಪಾಲಿಸುತ್ತಿದ್ದೇವೆಯೇ? ಹೌದು ಕೆಲವರು ಪಾಲಿಸುತ್ತಿದ್ದೇವೆ. ಆದರೆ ಪಾಲಿಸದವರ ಬೇಜವಾಬ್ದಾರಿತನಕ್ಕೆ ತುತ್ತಾಗುತ್ತಿದ್ದೇವೆ.
ಇಲ್ಲಿ ರೋಗಾಣುವನ್ನು ಹೊಂದಿದವರು, ಹರಡುತ್ತಿರುವವರು, ಹೊಂದದೇ ಇರುವವರು, ಯಾರು ಸುಖೀ? ರೋಗಾಣುವನ್ನು ಹೊಂದದೇ ಇರುವವರೇ? ಅಲ್ಲವೇ ಅಲ್ಲ, ಇಲ್ಲಿ ಯಾರೂ ಸುಖೀಯಲ್ಲ, ಏಕೆಂದರೆ ಹೊಂದದೇ ಇರುವವರು ಸಹ ಭಯದಿಂದ ತತ್ತರಿಸುತ್ತಿದ್ದಾರೆ.
ಆದ್ದರಿಂದ ನನ್ನ ಸುರಕ್ಷೆ ನನ್ನ ಕರ್ತವ್ಯ. ನಾನು ಮೊದಲು ಆತ್ಮಬಲವನ್ನು ವೃದ್ಧಿಸಿಕೊಳ್ಳಬೇಕು. ನಾನು ಆರೋಗ್ಯವಂತೆ, ಶಕ್ತಿವಂತೆ, ಧೈರ್ಯವಂತೆ ಎಂದು ಮನಸ್ಸಿನಲ್ಲಿ ಪದೇ ಪದೇ ಹೇಳಿಕೊಳ್ಳುತ್ತೇನೆ. ಸರಿಯಾದ ಆಹಾರ ಕ್ರಮ, ಕೋವಿಡ್ ತಡೆಯುವ ಸುರಕ್ಷ ಕ್ರಮಗಳನ್ನು ಪಾಲಿಸುತ್ತೇನೆ, ಪಾಲಿಸಿದ ಅನಂತರವೂ ಕೋವಿಡ್ ಬಂದರೆ ಧೈರ್ಯದಿಂದ ಎದುರಿಸುತ್ತೇನೆ. ನನ್ನಿಂದ ಮತ್ತೂಬ್ಬರಿಗೆ ಹರಡದಂತೆ ತಡೆಯುತ್ತೇನೆ. ನನ್ನ ಶಕ್ತಿ ಮೀರಿ ಹೋರಾಡುತ್ತೇನೆ. ಮತ್ತೆ ಮೊದಲಿನಂತೆ ಸುಂದರ ಜೀವನವನ್ನು ನೋಡಲಿಚ್ಛಿಸುತ್ತೇನೆ. ಆದ್ದರಿಂದ ಇಂದು ಹಾಗೂ ಎಂದೆಂದಿಗೂ “ನಾನೇ’ ನನ್ನ ಶಕ್ತಿಯಾಗಿದ್ದೇನೆ.
ಜಯಾ ಛಬ್ಬಿ, ಓಮನ್