ಮೈಸೂರು : ಈ ಬಾರಿ 50 ಸ್ಥಾನ ಕೊಡ್ತಿರಿ ಅಂತ ಗೊತ್ತಿದೆ. ಆದರೆ ನನಗೆ ಬೇಕಿರೋದು 123 ಸ್ಥಾನ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾನುವಾರ ಹೇಳಿಕೆ ನೀಡಿದ್ದಾರೆ.
ನಗರದ ರಿಂಗ್ ರಸ್ತೆಯ ಉತ್ತನಹಳ್ಳಿ ಬಳಿಯ ಮೈದಾನದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶದಲ್ಲಿ ಮಾತನಾಡಿ, ನರೇಂದ್ರ ಮೋದಿ ಹತ್ತು ಬಾರಿ ಬಂದ್ರೂ ಇಷ್ಟು ಜನ ಸೇರಿಸಲು ಸಾಧ್ಯವಿಲ್ಲ.ಕಾಂಗ್ರೆಸ್ ಬಿಜೆಪಿ ಕಾರ್ಯಕ್ರಮದಲ್ಲಿ ಅರ್ಧಗಂಟೆ ಅಷ್ಟೇ ಎದ್ದು ಹೋಗ್ತಾರೆ. ಆದ್ರೆ ನಮ್ಮ ಕಾರ್ಯಕ್ರಮ ಹಾಗಲ್ಲಪಂಚರತ್ನಯಾತ್ರೆ ಕಾರ್ಯಕ್ರಮದಲ್ಲಿ ನೀವು ಶಕ್ತಿ ನೀಡಿದ್ದೀರಿ. ನಮ್ಮ ಹತ್ತಿರ ಹಣ ಇಲ್ಲ, ಕುಕ್ಕರ್ ಕೊಡಲು ಸಾಧ್ಯವಿಲ್ಲ.ನೀವೇ ಕುಕ್ಕರ್ ಖರೀದಿ ಮಾಡಲು ಶಕ್ತಿ ತಂದು ಕೋಡೋದು ನಮ್ಮ ಸರ್ಕಾರ. ಇವತ್ತಿನ ಕಾರ್ಯಕ್ರಮಕ್ಕೆ ಎಲ್ಲಾ ಕಡೆಯಿಂದಲೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ದೇವೇಗೌಡರಿಗೆ ನೀವು ಕೊಡುವ ಚಿಕಿತ್ಸೆ ಮತ್ತಷ್ಟು ದೇವೇಗೌಡರಿಗೆ ಚೈತನ್ಯ ತಂದಿದೆ. ಚಾಮುಂಡೇಶ್ವರಿ ಆಶಿರ್ವಾದದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶ ಬರುವಂತಾಗಲಿ. ಚಾಮುಂಡೇಶ್ವರಿ ಬೆಟ್ಟದಲ್ಲಿ ದೀಪ ಬೆಳಗುವ ಮೂಲಕ ನಮಗೆ ಶುಭ ಸೂಚನೆ ಸಿಕ್ಕಿದೆ ಎಂದರು.
”ನನ್ನ ಆರೋಗ್ಯವನ್ನು ಲೆಕ್ಕಿಸದೇ ಪಂಚರತ್ನ ಯಾತ್ರೆ ಮಾಡಿದ್ದೇನೆ. ಹಗಲು ರಾತ್ರಿ ನಿದ್ದೆ ಮಾಡದೇ 90 ಕ್ಷೇತ್ರದಲ್ಲಿ ಪ್ರವಾಸ ಮಾಡಿ ಬಂದಿದ್ದೇನೆ. ಪ್ರಧಾನಿ ದೇವೇಗೌಡ್ರು ಇನ್ನೂ ಶತಾಯುಷಿಗಳಾಗಿ ಇರಬೇಕು. ಚಾಮುಂಡೇಶ್ವರಿ ಪಾದದಲ್ಲಿ ಈ ಕಾರ್ಯಕ್ರಮ ಆಗಬೇಕು ಅಂತ ಆಯೋಜನೆ ಮಾಡಿದ್ದೇನೆ. ಈ ಕಾರ್ಯಕ್ರಮ ಇಡಿ ರಾಜ್ಯಕ್ಕೆ ತಲುಪಬೇಕು, ಇದರಲ್ಲಿ ಏನು ಸ್ವಾರ್ಥ ಇಲ್ಲ. ನಿಮ್ಮ ಹಾರೈಕೆಯಿಂದ ಈ ಬಾರಿ 120 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು. ಈ ಪಂಚರತ್ನ ಯಾತ್ರೆ ಕಾರ್ಯಕ್ರಮ ನಿಮ್ಮ ಕಾರ್ಯಕ್ರಮ” ಎಂದರು.
Related Articles
”ಕೋಲಾರದ ಒಬ್ಬ ಯುವಕ ನನಗೆ ಒಂದು ಪತ್ರ ಕೊಟ್ಟಿದ್ದ. ರೈತರ ಮಕ್ಕಳಿಗೆ ಹೆಣ್ಣು ಕೊಡೊದಕ್ಕೆ ಹಿಂಜರಿಯುತ್ತಿದ್ದಾರೆ ಏನಾದ್ರೂ ಮಾಡಿ ಅಣ್ಣ ಎಂದಿದ್ದ.ಈ ವಿಚಾರಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೂ ಪಾದಯಾತ್ರೆ ಹೊರಟ್ಟಿದ್ದರು. ಇದಕ್ಕಾಗಿ ರೈತನ ಕುಟುಂಬಕ್ಕೆ ಗೌರವ ತಂದುಕೊಡಬೇಕು ಎಂಬುದಕ್ಕೆ ನಾನು ತಿರ್ಮಾನ ಮಾಡಿದ್ದೇನೆ. ಒರ್ವ ಹೆಣ್ಣು ಮಗಳು ತಲೆಗೆ ಬಟ್ಟೆ ಹಾಕಿಕೊಂಡು ಕುಳಿತಿದ್ದಳು. ಯಾಕಮ್ಮ ಅಂತಾ ಕೇಳಿದೆ, ಡಿಫಾರ್ಮ ಗೆ ಮೊದಲು ಸ್ತ್ರೀ ಸಹಾಯ ಸಂಘದಿಂದ ಹಣ ಕಟ್ಟಿದ್ದೇವೆ. ಈ ಬಾರಿ ಹಣ ಕಟ್ಟಲು ಸಹಾಯ ಮಾಡಿ ಎಂದು ಕೇಳಿದ್ದಳು. ಈ ವೇಳೆ ಕೂಡ ಆ ಹೆಣ್ಣು ಮಗಳು ನನ್ನ ಕಣ್ಣು ತೆರೆಸಿದ್ದಳು. ನಾಡಿನ ಹೆಣ್ಣು ಮಕ್ಕಳು ಸ್ತೀ ಶಕ್ತಿ ಸಹಾಯ ಸಂಘದಿಂದ ಪಡೆದ ಸಾಲ ಮನ್ನ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಈ ಬಗ್ಗೆಯೂ ನಾನು ತೀರ್ಮಾನ ಮಾಡಿದ್ದೇನೆ. ಕೆ.ಆರ್. ಪೇಟೆಯ ಒರ್ವ ಲಿವರ್ ಸಮಸ್ಯೆ ಬಗೆಹರಿಸಿಕೊಳ್ಳಲು ಜಮೀನು ಮಾರಿ 60 ಲಕ್ಷ ಕಳೆದುಕೊಂಡಿದ್ದ. ಇದಕ್ಕೆ ನಾನು ತಿರ್ಮಾನ ಮಾಡಿದ್ದೇನೆ. ಪ್ರತಿಯೊಬ್ಬರೂ ಆರೋಗ್ಯದ ವೆಚ್ಚ ಬರುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದೇನೆ. ಶ್ರೀಮಂತರ ಮಕ್ಕಳಿಗೆ ಸರಿಸಮನಾಗಿ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸ ಸಿಗಬೇಕು. 6600 ಪಂಚಾಯತಿ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಕೇಂದ್ರಗಳು, ಕಿಡ್ನಿ ಡಯಾಲಿಸಿಸ್ ಅನ್ನ ಒಂದು ರೂಪಾಯಿ ಪಡೆಯದೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇನೆ” ಎಂದರು.
18 ಗಂಟೆ ಹೋರಾಟ ಯಾರಿಗಾಗಿ?
”ದೇವೇಗೌಡರು ಎಂದೂ ಆರೋಗ್ಯ ಸರಿ ಇಲ್ಲ ಅಂತ ಆಸ್ಪತ್ರೆಗೆ ಹೋದವರಲ್ಲ. ಇಂದು ಆಸ್ಪತ್ರೆಗೆ ಯೋಗಬೇಕಾದ ಸ್ಥಿತಿ ಬಂತು. ನಿಮ್ಮ ಮಕ್ಕಳಾಗಿ ನಾವು ರಾಜ್ಯದ ತೆರಿಗೆ ದುಡ್ಡು ಲೂಟಿ ಮಾಡಿಲ್ಲ. ಯಾವುದೇ ಕಾರಣಕ್ಕೂ ನೀವು ನಮ್ಮನ್ನು ಬಿಟ್ಟು ಹೋಗುವಂತಿಲ್ಲ. ನೀವು ಬೆಳೆಸಿದಂತಹ, ನಿಮ್ಮ ಮಗ ಕೊಟ್ಟ ಕೊಡುಗೆ. ಒಬ್ಬ ಕನ್ನಡಿಗ ಮಾಡಿದ ಕೆಲಸವನ್ನು ಸ್ಮರಿಸಲುವ ಕೆಲಸ ಆಗಿಲ್ಲ. ನಾನು ಮುಖ್ಯಮಂತ್ರಿಯಾಗಿ ಮೆರೆಯುವುದನ್ನು ನೋಡೋದಕ್ಕೆ ಇರಬೇಕು ಎಂದು ಹೇಳುತ್ತಿಲ್ಲ. ಎರಡು ಬಾರಿ ಹೃದಯ ಚಿಕಿತ್ಸೆ ದಿನಕ್ಕೆ 18 ಗಂಟೆ ಹೋರಾಟ ಯಾರಿಗಾಗಿ. ರೈತ, ರೈತನ ಹೆಣ್ಣುಮಕ್ಕಳು, ನಾಡಿನ ಜನ ನೆಮ್ಮದಿಯಿಂದ ಬದುಕಬೇಕು. ಇದಕ್ಕಾಗಿ ನಮ್ಮ ಮುಂದೆ ದೇವೇಗೌಡರು ಇರಬೇಕು ಎಂದು ಕೇಳುತ್ತಿದ್ದೇನೆ. ನಾನು ಮುಖ್ಯಮಂತ್ರಿಯಾಗಿ ಮೆರೆಯಬೇಕು ಅಂತ ಅಲ್ಲ” ಎಂದರು.
ಸಮಾರಂಭದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸೇರಿ ಜೆಡಿಎಸ್ ಪ್ರಮುಖ ನಾಯಕರು ಅಭ್ಯರ್ಥಿಗಳು ಮತ್ತು ಲಕ್ಷಾಂತರ ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು.