Advertisement
ಕೊಲೆಯಾಗುತ್ತಾರೆ ಎಂಬ ಕಲ್ಪನೆ ಇರಲಿಲ್ಲ ಎಂದು ಪವಿತ್ರಾ ಹೇಳಿದರೆ, ರೇಣುಕಾ ಸ್ವಾಮಿ ಕೊಲೆಗೂ ನನಗೂ ಸಂಬಂಧವಿಲ್ಲ ಎಂದು ದರ್ಶನ್ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ತನಿಖಾಧಿಕಾರಿಗಳು ಹೇಳಿಕೆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ನಾನು ಕೊಲೆಯೇ ಮಾಡಿಲ್ಲ. ಆ ಉದ್ದೇಶ ನನಗೆ ಇರಲಿಲ್ಲ. ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ ಸಂಗತಿ ಪವನ್‌ನಿಂದ ಗೊತ್ತಾಯಿತು. ಆತನಿಗೆ ಎಚ್ಚರಿಕೆ ಕೊಟ್ಟು ಕಳಿಸೋಣವೆಂದು ರೇಣುಕಾ ಸ್ವಾಮಿಯನ್ನು ಕರೆತರುವಂತೆ ರಾಘವೇಂದ್ರನಿಗೆ ಹೇಳಿದ್ದೆ. ಬಳಿಕ ಶನಿವಾರ ಸಂಜೆ ರೇಣುಕಾ ಸ್ವಾಮಿಯನ್ನು ಶೆಡ್‌ನಲ್ಲಿ ನೋಡಿದ್ದೆ. ಇನ್ನೊಂದು ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದೆ. ಅನಂತರ ದುಡ್ಡು ಕೊಟ್ಟು ಊಟ ಮಾಡ್ಕೊಂಡು ಊರಿಗೆ ಹೋಗುವಂತೆ ಹೇಳಿ ಹೊರಟು ಹೋದೆ. ನಾನು ಈ ಕೊಲೆ ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ನಟ ದರ್ಶನ್ ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
Related Articles
ಪವಿತ್ರಾ ಗೌಡ ವಿಚಾರಣೆ ವೇಳೆ, ನನಗೆ ರೇಣುಕಾ ಸ್ವಾಮಿ ಅಶ್ಲೀಲ ಫೋಟೋ ಹಾಗೂ ಸಂದೇಶ ಕಳುಹಿಸುತ್ತಿದ್ದ. ಈ ವಿಚಾರವನ್ನು ಮನೆ ಕೆಲಸಕ್ಕಿದ್ದ ಪವನ್‌ಗೆ ಹೇಳಿದ್ದೆ. ಈ ವಿಷಯ ಯಾವುದೇ ಕಾರಣಕ್ಕೂ ದರ್ಶನ್‌ಗೆ ಗೊತ್ತಾಗ
ಬಾರದು ಎಂದೂ ಹೇಳಿದ್ದೆ. ಕೊಲೆ ಮಾಡುತ್ತಾರೆ ಎಂದು ಕಲ್ಪಿಸಿಯೂ ಇರಲಿಲ್ಲ. ಹೀಗಾಗುತ್ತಿದೆ ಎಂದು ಗೊತ್ತಿದ್ದರೆ ನಾನೇ ಪೊಲೀಸರಿಗೆ ದೂರು ಕೊಟ್ಟು ಬಗೆಹರಿಸಿಕೊಳ್ಳುತ್ತಿದ್ದೆ. ಅಶ್ಲೀಲ ಮೆಸೇಜ್ ಮಾಡಿದ್ದನಲ್ಲ ಎಂದು ಪಟ್ಟಣಗೆರೆಯ ಶೆಡ್‌ನಲ್ಲಿ ಆತನಿಗೆ ಚಪ್ಪಲಿಯಲ್ಲಿ ಹೊಡೆದು ಬಂದಿದ್ದೆ ಎಂದು ಪೊಲೀಸರ ಮುಂದೆ ಭಾವುಕರಾಗಿ ತಿಳಿಸಿದ್ದಾರೆ.
Advertisement
ಇನ್ನು ಚಿತ್ರದುರ್ಗದ ತೂಗುದೀಪ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ವಿಚಾರಣೆ ಸಂದರ್ಭದಲ್ಲಿ, ದರ್ಶನ್ ಸರ್ ನಂಬರ್ ಕೊಟ್ಟು ಆ ವ್ಯಕ್ತಿಯನ್ನು ಪತ್ತೆ ಮಾಡುವಂತೆ ಹೇಳಿದರು. ನಂಬರ್ ಸಿಕ್ಕಿದ್ದರಿಂದ ರೇಣುಕಾ ಸ್ವಾಮಿಯನ್ನು ಪತ್ತೆ ಮಾಡಿದೆ ಎಂದಿದ್ದಾನೆ ಎಂದು ತಿಳಿದು ಬಂದಿದೆ.
ಮೂರ್ಚೆ ಹೋಗಿರಬಹುದು ಎಂದುಕೊಂಡಿದ್ದೆರೇಣುಕಾ ಸ್ವಾಮಿ ಪವಿತ್ರಾ ಅಕ್ಕನಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಈ ವಿಷಯ ತಿಳಿಸಿದ ಪವಿತ್ರಾ ಅಕ್ಕ, ಇದ್ಯಾರು ಪತ್ತೆ ಮಾಡು ಎಂದು ಹೇಳಿದ್ದರು. ಈ ಬಗ್ಗೆ ದರ್ಶನ್‌ಗೂ ತಿಳಿಸಿದ್ದೆ. ಹಲ್ಲೆ ನಡೆಸಿದ ಬಳಿಕ ಆತ ಮೂಛೆì ಹೋಗಿರಬಹುದು ಎಂದುಕೊಂಡಿದ್ದೆವು ಎಂದು ಪವಿತ್ರಾ ಮನೆಯಲ್ಲಿ ಕೆಲಸಕ್ಕಿದ್ದ ಪವನ್ ವಿಚಾರಣೆ ವೇಳೆ ತಿಳಿಸಿದ್ದಾನೆ.