Advertisement
ಗುರುವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ, 2015ರ ತಮ್ಮ ಪಾಕ್ ಭೇಟಿ ಬಗ್ಗೆ ಪ್ರಸ್ತಾವಿಸುತ್ತಾ, “ನಾನು ಅಂದು ಪಾಕ್‌ಗೆ ಹೋದಾಗ ಅನೇಕ ಪತ್ರಕರ್ತರು ನನ್ನನ್ನು, “ಹೇ ವೀಸಾ ಇಲ್ಲದೇ ನೀವು ಬಂದುಬಿಟ್ಟಿರಾ’ ಎಂದು ಪ್ರಶ್ನಿಸಿದ್ದರು. ಆಗ ನಾನು, ಒಂದು ಕಾಲದಲ್ಲಿ ಇದು ನನ್ನ ದೇಶವೂ ಆಗಿತ್ತು ಎಂದೆ. ಆ ದೇಶದ ತಾಕತ್ತು ಮತ್ತು ಬಂಡವಾಳವೇನೆಂದು ನನಗೆ ಆಗಲೇ ಗೊತ್ತಾಗಿದೆ’ ಎಂದು ಹೇಳಿದ್ದಾರೆ.
70 ವರ್ಷಗಳ ಕಾಲ ನಾವು ಕರ್ತಾರ್ಪುರ ಸಾಹಿಬ್ ಅನ್ನು ಬೈನಾಕ್ಯುಲರ್‌ನಲ್ಲಿ ನೋಡಬೇಕಾಗಿತ್ತು. ನಾನೇನಾದರೂ ಅಂದು ಪ್ರಧಾನಿ ಆಗಿರುತ್ತಿದ್ದರೆ, ಆ ಸೈನಿಕರ ಹಸ್ತಾಂತರದ ಬದಲಿಗೆ ಕರ್ತಾರ್ಪುರ ಸಾಹಿಬ್ ಅನ್ನು ವಾಪಸ್ ಪಡೆಯುತ್ತಿದ್ದೆ ಎಂದಿದ್ದಾರೆ.
Related Articles
ಹರಿಯಾಣದ ಜನ ಪ್ರತೀ10 ಹೆಜ್ಜೆಗೆ ಒಮ್ಮೆ ರಾಮ್ ರಾಮ್ ಎನ್ನುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೇರಿದರೆ ರಾಮ್ ರಾಮ್ ಎನ್ನುವ ಎಲ್ಲರನ್ನೂ ಜೈಲಿಗಟ್ಟುತ್ತದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಆ ಪಕ್ಷವು ಭಾರತವನ್ನು ವಿಭಜಿಸಿ, ತನ್ನ ವೋಟ್‌ಬ್ಯಾಂಕ್ ಅನ್ನು ಓಲೈಸಲು ಈಗಾಗಲೇ ಎರಡು ಮುಸ್ಲಿಂ ದೇಶಗಳನ್ನು ಸೃಷ್ಟಿಸಿದೆ ಎಂದೂ ಮೋದಿ ಹೇಳಿದ್ದಾರೆ.
Advertisement
“ಹಸು ಹಾಲು ಕೊಡೋ ಮೊದಲೇ ತುಪ್ಪಕ್ಕೆ ಜಗಳ’ಒಂದು ಕಡೆ ನಿಮ್ಮ ಸೇವಕ ಮೋದಿ ಇದ್ದರೆ, ಮತ್ತೂಂದೆಡೆ ಕೋಮುವಾದಿ ಇಂಡಿಯಾ ಕೂಟವಿದೆ. ನೀವೇ ಆಯ್ಕೆ ಮಾಡಿ. ಹಸು ಹಾಲು ಕೊಡುವ ಮುನ್ನವೇ ತುಪ್ಪಕ್ಕೆ ಜಗಳ ನಡೆದಂತೆ, ಇಂಡಿಯಾ ಕೂಟನ ದಲ್ಲಿ ಪ್ರಧಾನಿ ಹುದ್ದೆ ಜಗಳ ಆರಂಭವಾಗಿದೆ ಎಂದಿದ್ದಾರೆ.