Advertisement

ನಾನು ಅಪಹರಣ ಮಾಡಿಸಿಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ: ಭವಾನಿ ರೇವಣ್ಣ 

08:07 PM Jun 08, 2024 | Team Udayavani |

ಬೆಂಗಳೂರು: ಕೆ.ಆರ್‌.ನಗರದ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಮುಂದೆ ತನಿಖೆಗಾಗಿ ಹಾಜರಾಗಿರುವ ಭವಾನಿ ರೇವಣ್ಣ ಅವರು, “ನಾನು ಯಾರನ್ನೂ ಅಪಹರಣ ಮಾಡಿಸಿಲ್ಲ. ಎಲ್ಲರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

Advertisement

ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಭವಾನಿ  ಮಹತ್ವದ ಮಾಹಿತಿಯನ್ನೇನೂ ನೀಡಿಲ್ಲ. ಅಪಹರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಷ್ಟೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳ ನಡುವಿನ ಆಡಿಯೊ ಸಂಭಾಷಣೆಯನ್ನು ಕೇಳಿಸಿ ವಿಚಾರಿಸಿದಾಗ, “ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನನ್ನ ಮೇಲೆ ಬಂದಿರುವ ಆರೋಪಗಳೆಲ್ಲ ಸುಳ್ಳು’ ಎಂದೇ ವಾದಿಸಿದ್ದಾರೆ ಎನ್ನಲಾಗಿದೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸಂತ್ರಸ್ತೆ ನಮ್ಮ ಮನೆಯಲ್ಲಿ  ಕೆಲಸ ಮಾಡುತ್ತಿದ್ದುದು ನಿಜ. ಆದರೆ, ಅಪಹರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಭವಾನಿ ಹೇಳಿದ್ದಾರೆ ಎನ್ನಲಾಗಿದೆ.

ಆಡಿಯೋ ಮುಂದಿಟ್ಟು ಪ್ರಶ್ನಿಸಿದ ಎಸ್‌ಐಟಿ :

“ಇನ್ನು 150-200 ರೂಪಾಯಿಯ ಸೀರೆ ಕೊಡಿಸಿದರಾಯಿತು, ಕರೆದುಕೊಂಡು ಬಾ. ಅಥವಾ 2 ವರ್ಷ ಶಿಕ್ಷೆ ಆಗುತ್ತದೆ ಅಂತ ಹೇಳು ಬರುತ್ತಾಳೆ’ ಎಂದು ಚಾಲಕನೊಂದಿಗೆ ಭವಾನಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊವೊಂದನ್ನು ಸಾಕ್ಷ್ಯವಾಗಿಟ್ಟುಕೊಂಡು ಎಸ್‌ಐಟಿ ಪ್ರಶ್ನಿಸಿತ್ತು ಎನ್ನಲಾಗಿದೆ. ಭವಾನಿ ಹೇಳಿಕೆ ದಾಖಲಿಸಿಕೊಂಡಿರುವ ಎಸ್‌ಐಟಿಯು ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅದಕ್ಕೆ ಭವಾನಿ  ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next