Advertisement

ಬಡವರ ಹೆಸರಲ್ಲಿ ಲೂಟಿ ಮಾಡಿದ್ದೆ ಸಾಧನೆ; ಚಂದ್ರಾರೆಡ್ಡಿ

04:32 PM Jan 09, 2023 | Team Udayavani |

ಬಂಗಾರಪೇಟೆ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್‌ ಅವರನ್ನು ಗೆಲ್ಲಿಸಿದರೆ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಬೂತ್‌ ವಿಜಯ ಅಭಿಯಾನದ ಜಿಲ್ಲಾ ಸಂಚಾಲಕ ಕೆ. ಚಂದ್ರಾರೆಡ್ಡಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisement

ತಾಲೂಕಿನ ಬಲಮಂದೆ ಗ್ರಾಪಂನ ಯರಗೋಳ್‌ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೂತ್‌ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಶಾಸಕರು ಸ್ಥಳೀಯರಾಗಿದ್ದರೆ ಮಾತ್ರ ಬಂಗಾರಪೇಟೆ ಕ್ಷೇತ್ರ ಅಭಿವೃದ್ಧಿ ಆಗುತ್ತದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಪಕ್ಷದ ಶಾಸಕರಿದ್ದರೆ ಹೆಚ್ಚು ಅನುದಾನ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ.

ಸ್ಥಳೀಯವಾಗಿ ಬಿಜೆಪಿ ಶಾಸಕರಿಲ್ಲದ ಕಾರಣ, ಅಭಿವೃದ್ಧಿ ಮರೀಚಿಕೆ ಆಗಿದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಶರವೇಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಆಗುತ್ತಿರುವುದನ್ನು ತಾವು ಗಮಿಸಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ಬಡವರ ಕೈಹಿಡಿದಿದೆ: ಕಳೆದ ಎರಡು ವರ್ಷದಿಂದ ಕೊರೊನಾದಿಂದ ಬಿಪಿಎಲ್‌ ಕಾರ್ಡುದಾರರಿಗೆ ಉಚಿತ ಅಕ್ಕಿ ಕೊಡುವ ಮೂಲಕ ಬಿಜೆಪಿ ಸರ್ಕಾರ ಕಷ್ಟಕಾಲದಲ್ಲಿ ಬಡವರ ಕೈಹಿಡಿದಿದೆ. ಇಂತಹ ಸರ್ಕಾರವನ್ನು ಯಾವತ್ತೂ ಜನ ಮರೆಯಬಾರದು.

ಕಷ್ಟಕಾಲದಲ್ಲಿ ಬಡವರ ನೆರವಿಗೆ ಬಂದಿದ್ದು ಬಿಜೆಪಿ ಸರ್ಕಾರ. ಆದರೆ, ಹೆಸರು ಪಡೆಯಲು ಕಾಂಗ್ರೆಸ್‌ ನಾಯಕರು ಉಚಿತ ಅಕ್ಕಿ ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂದು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್‌ನ ಇಂತಹ ಅಪಪ್ರಚಾರಕ್ಕೆ ಯಾರೂ ಕಿವಿಕೊಡದೆ ವಾಸ್ತವಾಂಶವನ್ನು ಅರಿತು ಬರುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಜನಪರ ಯೋಜನೆಗಳಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.

Advertisement

ಹೊಸ ಜೀವನಕ್ಕೆ ನಾಂದಿ: ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಡಬಲ್‌ ಇಂಜಿನ್‌ ಇದ್ದಂತೆ, ಎರಡೂ ಸರ್ಕಾರಗಳು ದೇಶದ ಜನರ ದಿಕ್ಕನ್ನು ಬದಲಾಯಿಸಿ ಹೊಸ ಜೀವನಕ್ಕೆ ನಾಂದಿ ಹಾಡಲು ಮುಂದಾಗಿದ್ದಾರೆ. ಆದರೆ, ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್‌ ಸರ್ಕಾರ ಬರೀ ಗರೀಬಿ ಹಠಾವೋ ಹೆಸರಲ್ಲಿ ಲೂಟಿ ಮಾಡಿದ್ದೆ ಸಾಧನೆ ಆಗಿದೆ ಎಂದು ಕಾಂಗ್ರೆಸ್‌ ದುರಾಡಳಿತವನ್ನು ಟೀಕಿಸಿದರು.

ಇದು ಸಾಲದು ಎಂಬಂತೆ ಈಗ ಬಿಜೆಪಿ ಸರ್ಕಾರದ ಸಾಧನೆಗಳನ್ನು ನಮ್ಮ ಸಾಧನೆ ಎಂದು ಜನರಲ್ಲಿ ತಪ್ಪು ಸಂದೇಶ ನೀಡಿ ಜನರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಇದಕ್ಕೆ ಅವಕಾಶ ನೀಡಬಾರೆಂದು ಹೇಳಿದರು.

36 ಜನರ ಸಮಿತಿ: ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ವಿ.ಮಹೇಶ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಕ್ಷೇತ್ರದ ಮತದಾರರಿಗೆ ಮನವರಿಕೆ ಮಾಡಿಕೊಡಲು ಬೂತ್‌ ವಿಜಯ ಅಭಿಯಾನ ಆರಂಭಿಸಲಾಗಿದೆ. ಕ್ಷೇತ್ರದ ಎಲ್ಲಾ 259 ಬೂತ್‌ಗಳಲ್ಲಿಯೂ 36 ಜನರ ಸಮಿತಿಯನ್ನು ರಚಿಸಿ ಪಕ್ಷವನ್ನು ಸಂಘಟನೆ ಮಾಡಿ, ಬಿಜೆಪಿ ಸರ್ಕಾರಕ್ಕೂ ಕಾಂಗ್ರೆಸ್‌ ಸರ್ಕಾರಕ್ಕೂ ಇರುವ ವ್ಯತ್ಯಾಸವನ್ನು ಜನತೆಗೆ ತಿಳಿಸಬೇಕು ಎಂದು ವಿವರಿಸಿದರು.

ಅಂತರ ಕಾಯ್ದುಕೊಳ್ಳಬೇಕು: ಚುನಾವಣೆ ಸಮಯದಲ್ಲಿ ಮಾತ್ರ ಹಲವು ಕೊಡುಗೆಗಳನ್ನು ನೀಡಿ ಯಾಮಾರಿಸಿ ಮತ ಪಡೆದು ನಂತರ ಮತ ನೀಡಿದವರನ್ನೇ ತುಳಿಯುವ ಕೆಲಸ ಮಾಡುವ ನಾಯಕರಿಂದ ಮತದಾರರು ಅಂತರ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು. ಈ ವೇಳೆ ಪಕ್ಷದ ತಾಲೂಕು ಬಿಜೆಪಿ ಅಧ್ಯಕ್ಷ ಎಂ. ನಾಗೇಶ್‌, ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ, ತಾಪಂ ಮಾಜಿ ಸದಸ್ಯೆ ಎಲ್‌.ಅಂಬೂಬಾಯಿ, ಬತ್ತ ಲಹಳ್ಳಿ ಮಂಜುನಾಥ್‌, ದುರ್ಗಾಜಿರಾವ್‌, ಕೃಷ್ಣೋ ಜಿರಾವ್‌, ಮುನಿಯಪ್ಪ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next