Advertisement

ಮಮತಾ ಬ್ಯಾನರ್ಜಿಗೆ ಮನವರಿಕೆ ಮಾಡಲು ನನ್ನಿಂದ ಸಾಧ್ಯವಿಲ್ಲ : ಶಾ ಲೇವಡಿ

10:18 PM Jun 25, 2022 | Team Udayavani |

ನವದೆಹಲಿ: 2002 ರ ಗುಜರಾತ್ ಗಲಭೆ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ಲಾಘಿಸಿದ್ದಾರೆ. ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಮನವರಿಕೆ ಮಾಡಲು ಸಾಧ್ಯವಿಲ್ಲಎಂದು ಲೇವಡಿ ಮಾಡಿದ್ದಾರೆ.

Advertisement

ಸುದ್ದಿ ಸಂಸ್ಥೆ ಎಎನ್ ಐ ಗೆ ನೀಡಿದ ಸಂದರ್ಶನದಲ್ಲಿ, ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ “ರಾಜಕೀಯ ಪ್ರೇರಿತ” ಆರೋಪಗಳನ್ನು ಮಾಡಿದವರು ಈಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದಾಗ್ಯೂ, ಅಗತ್ಯವಿದ್ದಾಗ ಮತ್ತು ಅವರು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲದಿದ್ದರೆ, ಅವರು ಕೇಂದ್ರದ ಸಹಾಯವನ್ನು ಕೇಳಬಹುದು. ರಾಜ್ಯವು ಹೇಳಿದರೆ ಮಾತ್ರ ಕೇಂದ್ರವು ಸೈನ್ಯವನ್ನು ಕಳುಹಿಸಬಹುದು ಮತ್ತು ಅಂತಹ ಸಂದರ್ಭದಲ್ಲಿ ತಕ್ಷಣವೇ ಪಡೆಗಳನ್ನು ಕಳುಹಿಸಲಾಗುತ್ತದೆ ಎಂದು ಶಾ ಹೇಳಿದರು.

‘ಮಮತಾ ಬ್ಯಾನರ್ಜಿ ಅವರನ್ನು ಮನವೊಲಿಸುವ ಶಕ್ತಿ ನಿಮಗಾಗಲಿ ನನಗಾಗಲಿ ಇಲ್ಲ. ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಪ್ರತಿಯೊಬ್ಬರ ಪ್ರಜಾಸತ್ತಾತ್ಮಕ ಹಕ್ಕು ಎಂದು ಅವರು ಸಂದರ್ಶನದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next