Advertisement

ನನಗೆ ಸಿಎಂ ಆಗೋ ಬಯಕೆ ಇಲ್ಲ

06:00 AM Oct 27, 2018 | |

ಶಿವಮೊಗ್ಗ/ಸಾವಳಗಿ: ನನಗೆ ಸಿಎಂ ಆಗಬೇಕೆಂಬ  ಬಯಕೆಯಿಲ್ಲ. ಆದರೆ, ಯಡಿಯೂರಪ್ಪ ಅವರಿಗೆ ಮತ್ತೂಮ್ಮೆ ಸಿಎಂ ಆಗಬೇಕೆಂಬ ದುರಾಸೆಯಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪರದು ಆಸೆ ಅಲ್ಲ, ದುರಾಸೆ. ಯಾವುದೇ ಕಾರಣಕ್ಕೂ ಅವರ ಆಸೆ ಈಡೇರಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಯಡಿಯೂರಪ್ಪ ಪದೇಪದೆ ಹೇಳುತ್ತಾರೆ. ಅಪವಿತ್ರ ಮೈತ್ರಿ ಎಂದು ಹೇಳಲು ಇವರಿಗೆ ನೈತಿಕತೆ ಇದೆಯೇ ಎಂದು
ಪ್ರಶ್ನಿಸಿದರು. ಹಿಂದೆ ರಾಜ್ಯದಲ್ಲಿ ಜೆಡಿಎಸ್‌ ಜತೆ, ಬಿಹಾರದಲ್ಲಿ ಜೆಡಿಯು ಮತ್ತು ಜಮ್ಮು- ಕಾಶ್ಮೀರದಲ್ಲಿ ಅಧಿಕಾರಕ್ಕಾಗಿ ಬಿಜೆಪಿ ಮಾಡಿಕೊಂಡ ಮೈತ್ರಿ ಪವಿತ್ರವೇ? ರಾಜಕೀಯ ಎಂಬುದು ಗಣಿತ ಅಲ್ಲ. ಅದು ಬದಲಾಗುತ್ತದೆ ಎಂದರು. 

Advertisement

ಬಿಜೆಪಿಯವರಿಗೆ ತತ್ವ, ನೀತಿ, ಸಿದ್ದಾಂತ ಇಲ್ಲ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರಪ್ಪನಾಣೆ ಬಿಜೆಪಿಗೆ ವಾಪಸ್‌ ಹೋಗಲ್ಲ, ಬಿಜೆಪಿ ಮುಗಿಸುವುದೇ ನನ್ನ ಗುರಿ ಎಂದಿದ್ದರು. ಈಶ್ವರಪ್ಪ ಕೂಡ ಬಿಜೆಪಿಯಿಂದ ಶನಿ ತೊಲಗಿತು ಎಂದು ಹೇಳಿದ್ದರು. ಆದರೆ, ಈಗ ಸಮ್ಮಿಶ್ರ ಸರ್ಕಾರ ಅಪವಿತ್ರ ಎನ್ನುತ್ತಾರೆ. ಮತ್ತೂಬ್ಬರನ್ನು ಟೀಕಿಸಲು ಇವರಿಗೆ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿ
ದರು. ಬಳಿಕ ಬಾಗಲಕೋಟೆ ಜಿಲ್ಲೆ ಸಾವಳಗಿಯಲ್ಲಿ ಮಾತನಾಡಿ, ಬಿಜೆಪಿಯವರಿಗೆ ಸಾಲ ಮನ್ನಾ ಮಾಡ್ರಿ ಎಂದರೆ, ನಮ್ಮ ಹತ್ರ ನೋಟು ಪ್ರಿಂಟ್‌ ಮಾಡುವ ಮಷಿನ್‌ ಇಲ್ಲ ಅಂತ ಹೇಳಿದ್ದರು.

ಇಂದು ಸಾಲ ಮನ್ನಾ ಮಾಡಿ ಎನ್ನುವುದು ಸರೀನಾ? ನಾನು ರೈತರ ಸಾಲ ಮನ್ನಾ ಮಾಡಿದೆ. ಈಗ ಮೈತ್ರಿ ಸರ್ಕಾರದಲ್ಲೂ ರೈತರ ಸಾಲ ಮನ್ನಾ ಮಾಡಿದ್ದೀವಿ. ನೀವು ರೈತರು ಯೋಚನೆ ಮಾಡಬೇಕು. ರೈತರ ಸಾಲಮನ್ನಾ ಮಾಡಿರೋದು ಕಾಂಗ್ರೆಸ್‌, ಬಿಜೆಪಿ ಅಲ್ಲ ಎಂದರು.

ಮರಾಠಿಯಲ್ಲಿ ಮಾತಾಡಿದ ಶಾಸಕಿ 
ಜಮಖಂಡಿ: ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ ಮರಾಠಿಯಲ್ಲಿ ಮಾತನಾಡಿ ದರು.
ಜಮಖಂಡಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಲಕಿ ಗ್ರಾಮದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಸಮ್ಮುಖದಲ್ಲೇ ಶಾಸಕಿ ಅಂಜಲಿ ನಿಂಬಾಳ್ಕರ ಮರಾಠಿಯಲ್ಲಿ ಮಾತನಾಡಿದ್ದು, ಅದೀಗ ವಿವಾದಕ್ಕೀಡಾಗಿದೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಮಧು ಬಂಗಾರಪ್ಪ ಡಮ್ಮಿ ಅಭ್ಯರ್ಥಿ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದ್ದಾರೆ.
ಆದರೆ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರೇ ಡಮ್ಮಿ ಹೊರತು ನಮ್ಮ ಅಭ್ಯರ್ಥಿ ಅಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮತಗಳನ್ನು ಗಮನಿಸಿದಾಗ ಮಧು ಬಂಗಾರಪ್ಪ ಪ್ರಬಲ ಅಭ್ಯರ್ಥಿ ಯಾಗಿದ್ದು, ಗೆಲ್ಲುವ ವಿಶ್ವಾಸವಿದೆ.

● ಸಿದ್ದರಾಮಯ್ಯ, ಮಾಜಿ ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next