Advertisement

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

11:09 AM Dec 03, 2022 | Team Udayavani |

ವಾಷಿಂಗ್ಟನ್: ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಅಮೆರಿಕಾದ ಭಾರತೀಯ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಅವರು ಹಸ್ತಾಂತರ ಮಾಡಿದರು.

Advertisement

ಮುಧುರೈನಲ್ಲಿ ಹುಟ್ಟಿ ಅಮೆರಿಕಾದಲ್ಲಿ ಬೆಳೆದ ಭಾರತೀಯ ಮೂಲದ ಸುಂದರ್‌ ಪಿಚೈ ಅವರಿಗೆ 2022 ರಲ್ಲಿ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

ರಾಯಭಾರಿ ಕಚೇರಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತಾನಾಡಿದ ಅವರು, “”ಭಾರತವು ನನ್ನ ಒಂದು ಭಾಗವಾಗಿದೆ ಮತ್ತು ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ಭಾರತವನ್ನು ಕೊಂಡೊಯ್ಯುತ್ತೇನೆ. ಈ ಸುಂದರವಾದ ಪ್ರಶಸ್ತಿಯನ್ನು ನಾನು ಸುರಕ್ಷಿತವಾಗಿಡುತ್ತೇನೆ. ನನ್ನ ಆಸಕ್ತಿಗಳನ್ನು ಅನ್ವೇಷಿಸಲು ನನಗೆ ಅವಕಾಶಗಳಿವೆ ಎಂದು ನನಗಾಗಿ ಬಹಳಷ್ಟನ್ನು ತ್ಯಾಗ ಪೋಷಕರು ಹಾಗೂ ನನಗೆ ಕಲಿಕೆ ಮತ್ತು ಜ್ಞಾನವನ್ನು ಪಾಲಿಸಿದ ಕುಟುಂದೊಂದಿಗೆ ಬೆಳೆಯಲು ನಾನು ಅದೃಷ್ಟಶಾಲಿಯಾಗಿದ್ದೆ ಎಂದು ಸುಂದರ್‌ ಪಿಚೈ ಹೇಳಿದರು.

ಇದೇ ವೇಳೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ ಭಾರತ ಸರ್ಕಾರಕ್ಕೆ ಪಿಚೈಅವರು ಕೃತಜ್ಞತೆಯನ್ನು ಸಲ್ಲಿಸಿದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next