Advertisement

18 songs ಒಂದೇ ಬಾರಿಗೆ ಹಾಡಬಲ್ಲೆ!!: 90ರ ಹರೆಯದಲ್ಲಿ ಆಶಾ ಭೋಂಸ್ಲೆ

09:10 PM Feb 28, 2024 | Team Udayavani |

ಮುಂಬಯಿ: ಸಂಗೀತ ಲೋಕದ ದಂತಕಥೆ ಎನಿಸಿಕೊಂಡಿರುವ ಆಶಾ ಭೋಂಸ್ಲೆ 90 ರ ಹರೆಯದಲ್ಲಿಯೂ ಇಂದಿಗೂ ಸಹ ಒಂದೇ ಬಾರಿಗೆ 18 ಹಾಡುಗಳನ್ನು ಹಾಡುತ್ತೇನೆ ಎಂದು ಉತ್ಸಾಹದಲ್ಲಿ ಹೇಳಿಕೊಂಡಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಗೀತ ಲೋಕದ ಸಾಮ್ರಾಜ್ಞೆ ಎನಿಸಿಕೊಂಡಿರುವ ಆಶಾ ಭೋಂಸ್ಲೆ, 90 ನೇ ಹುಟ್ಟುಹಬ್ಬವನ್ನು ಆಚರಿಕೊಳ್ಳುತ್ತಿದ್ದು ಮಾರ್ಚ್ 9 ರ ಸಂಗೀತ ಕಚೇರಿಯಲ್ಲಿ ಗಾಯನ ಪ್ರಸ್ತುತಿ ಮಾಡಲಿದ್ದಾರೆ.

“ನಾನು ಹೆಚ್ಚು ಕಾಲ ಬದುಕಿದರೆ ಮಹಾರಾಷ್ಟ್ರದ ಎಲ್ಲೆಡೆ ಹೋಗಿ ಪ್ರದರ್ಶನಗಳನ್ನು ನೀಡುತ್ತೇನೆ. ನನ್ನ ಕಾರ್ಯಕ್ರಮದ ಹೆಸರು ‘ವೋ ಫಿರ್ ನಹೀ ಆತಿ ಹೈ’. ನೀವು ಆ ನನ್ನನ್ನು ನೋಡಿಲ್ಲ ಎಂದು ಎಂದಿಗೂ ವಿಷಾದಿಸಬಾರದು. ಕಿಶೋರ್ ಕುಮಾರ್ ಮತ್ತು ಇತರ ಗಾಯಕರ ಪ್ರದರ್ಶನವನ್ನು ನಾವು ನೋಡಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಈಗ ನಾವು ಆಶಾ ಭೋಂಸ್ಲೆ ಅವರನ್ನು ನೋಡಿದ್ದೇವೆ ಎಂದು ನೀವು ಹೇಳಬಹುದು ”ಎಂದರು.

”ಹಾಡುವುದು ನನ್ನ ಉತ್ಸಾಹ. ಬಾಲ್ಯದಲ್ಲಿಯೂ ಹಾಡುತ್ತಿದ್ದೆ, ಆದರೆ ಸಂದರ್ಭಗಳಿಂದಾಗಿ ವೃತ್ತಿಪರ ಗಾಯನವನ್ನು ಆಯ್ದುಕೊಂಡೆ.ನನಗೆ ಹೆಸರು ಮತ್ತು ಖ್ಯಾತಿ ಸಿಕ್ಕಿತು, ಜನರು ನನ್ನನ್ನು ಗುರುತಿಸಲು ಪ್ರಾರಂಭಿಸಿದರು. ಕೆಲಸ ಇಲ್ಲದಿದ್ದರೂ ಹಾಡುತ್ತಲೇ ಇರುತ್ತೇನೆ. ನಾನು ಅಭ್ಯಾಸ ಮಾಡುತ್ತಲೇ ಇರುತ್ತೇನೆ. ನಾನು ಎಂದಿಗೂ ಹಾಡುವುದನ್ನು ಬಿಟ್ಟಿಲ್ಲ, ಅದಕ್ಕಾಗಿಯೇ ನನ್ನ ಧ್ವನಿ ಇಂದಿಗೂ ಸರಿಯಾಗಿದೆ. ಒಬ್ಬರ ಧ್ವನಿಯನ್ನು ಕಾಪಾಡಿಕೊಳ್ಳುವುದು, ನಿಮ್ಮ ದೇಹವನ್ನು ನೋಡಿಕೊಳ್ಳುವುದು ಮುಖ್ಯವಾದದ್ದು” ಎಂದು ಹೇಳಿದರು.

“ನಾನು ಇತರರಿಗಾಗಿ ಅಭ್ಯಾಸ ಮಾಡುವುದಿಲ್ಲ. ನಾನು ಅದನ್ನು ಇಷ್ಟಪಡುತ್ತೇನೆ ಏಕೆಂದರೆ ನಾನು ನನಗಾಗಿ ಅಭ್ಯಾಸ ಮಾಡುತ್ತೇನೆ. ನಾನು 10 ವರ್ಷದವಳಿದ್ದಾಗ ನನ್ನ ಮೊದಲ ಹಾಡನ್ನು ಹಾಡಿದ್ದೆ, ಈಗ 80 ವರ್ಷಗಳು ಕಳೆದಿವೆ. ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ, ಏಕೆಂದರೆ 80 ವರ್ಷಗಳಿಂದ ನನ್ನ ಧ್ವನಿಯನ್ನು ನೀವು ಹೇಗೆ ಸಹಿಸಿಕೊಂಡಿದ್ದೀರಿ? ಎಂದು ಹಾಸ್ಯ ಚಟಾಕಿ ಹಾರಿಸಿದರು.

Advertisement

ಈ ವಯಸ್ಸಿನಲ್ಲಿ ನಾನು ವೇದಿಕೆಯಲ್ಲಿ ಸುಮಾರು 18 ಹಾಡುಗಳನ್ನು ಹಾಡುತ್ತೇನೆ ಎಂದು ವಿಶ್ವಾಸದ ನುಡಿಗಳನ್ನು ಆಡಿದರು.

ಐವರು ಒಡಹುಟ್ಟಿದವರಲ್ಲಿ ಭೋಂಸ್ಲೆ ಎರಡನೆಯವರು. ಲತಾ ಮಂಗೇಶ್ಕರ್ ಹಿರಿಯಕ್ಕ. ಭೋಂಸ್ಲೆ ಅವರು ಕೊನೆಯದಾಗಿ 2023 ಸೆಪ್ಟೆಂಬರ್ 8 ರಂದು ಲತಾ ಮಂಗೇಶ್ಕರ್ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ದುಬೈನಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಮೊಮ್ಮಗಳು ಝನಾಯಿ ಭೋಸ್ಲೆ ಅವರೊಂದಿಗೆ ಪ್ರದರ್ಶನ ನೀಡಲಿರುವುದು ವಿಶೇಷ. “ನನ್ನ ಅಜ್ಜಿಗೆ 90 ರ ಹರೆಯದಲ್ಲೂ ನೀವು ತುಂಬಾ ಪ್ರೀತಿಯನ್ನು ನೀಡಿದ್ದೀರಿ ಎಂದು ನನಗೆ ಕಣ್ಣೀರು ತರಿಸುತ್ತದೆ.ನಾನು ಈ ಮನೆಯಲ್ಲಿ ಜನಿಸಿದೆ ಎಂದು ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ.

ಭೋಂಸ್ಲೆ ಅವರು ತಮ್ಮ ದಿವಂಗತ ಪತಿ-ಸಂಗೀತ ಸಂಯೋಜಕ ಆರ್‌ಡಿ ಬರ್ಮನ್ ಅವರ ನೆನಪಿಗಾಗಿ 1972 ರ ಚಲನಚಿತ್ರ “ಅಮರ್ ಪ್ರೇಮ್” ನ “ಕುಚ್ ತೋ ಲೋಗ್ ಕಹೆಂಗೆ” ಗೀತೆಯ ಕೆಲವು ಸಾಲುಗಳನ್ನು ಗುನುಗಿದರು.

Advertisement

Udayavani is now on Telegram. Click here to join our channel and stay updated with the latest news.

Next