Advertisement

ಪ್ರತಿ ಎಕರೆಗೆ 4 ಸಾವಿರ ರೂ.ನಂತೆ 150 ಎಕರೆ ಜಮೀನು ಖರಿದಿಸಿದ್ದೆ: ಜಿಗಜಿಣಗಿ

03:55 PM Feb 06, 2023 | keerthan |

ವಿಜಯಪುರ: ದೇಶದಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿರುವ 71 ಸಂಸದರ ಆಸ್ತಿಯಲ್ಲಿ ನನ್ನ ಆಸ್ತಿ ಹೆಚ್ಚಿದೆ. ಅದಕ್ಕೆ ಕಾರಣ ಹಲವು ವರ್ಷಗಳ ಹಿಂದೆ ಪ್ರತಿ ಎಕರೆಗೆ ಕೇವಲ 4 ಸಾವಿರ ರೂ‌. ನಂತೆ 150 ಎಕರೆ ಜಮೀನು ಖರೀದಿಸಿದ್ದೇನೆ. ಈಗಲೂ ಅದೇ ಮೌಲ್ಯ ಇರಲು ಸಾಧ್ಯವೇ. ಹೀಗಾಗಿ ಇಂದಿನ ಮೌಲ್ಯದಲ್ಲಿ ನನ್ನ ಆಸ್ತಿ ಹೆಚ್ಚಿದೆಯೇ ಹೊರತು ಯಾರ ಜೇಬಿಗೂ ಕೈಹಾಕಿಲ್ಲ ಎಂದು ವಿಜಯಪುರ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಸ್ತಿ ಹೆಚ್ಚಿಸಿಕೊಳ್ಳಲು ನಾನೇನು ರೋಡ್ ಕೆತ್ತಿ ರೊಕ್ಕ ಮಾಡಿಲ್ಲ. ದಶಕದ ಹಿಂದೆ ಖರೀದಿಸಿದ್ದ 150 ಎಕರೆ ಜಮೀನು ಆಸ್ತಿಯ ಮೌಲ್ಯ ಇದೀಗ ಸಹಜವಾಗಿ ಹೆಚ್ಚಿದೆ ಎಂದು ಸಮಜಾಯಿಷಿ ನೀಡಿದರು.

ದಲಿತ ಸಿ.ಎಂ ವಿಷಯದಲ್ಲಿ ನಾನು ಸಾಯುವವರೆಗೂ ಬಯಸುತ್ತಲೇ ಇರುತ್ತೇನೆ. ಆದರೆ ನನಗೇ ಬೇಕೆಂಬ ಆಸೆ ಇಟ್ಟಿಲ್ಲ, ಯಾವುದೇ ಅಧಿಕಾರದ ಹಿಂದೆ ಬಿದ್ದಿಲ್ಲ. ದೇವರೂ ನನ್ನ‌ ಕೈಬಿಟ್ಟಿಲ್ಲ. ಬರುವುದಿದ್ದರೆ ತಾನೇ ಬರುತ್ತದೆ. ಬಂದ್ರೆ ಚಾರಾಣೆ, ಹೋದ್ರೆ ಬಾರಾಣೆ ಎಂದು ಹೇಳಿದರು.

ದೇವರು ನನಗೆ ಆನೆಯಂಥಹ ಶಕ್ತಿಕೊಟ್ಟಿದ್ದರೂ ಇರುವೆಯಂತೆ ದುಡಿಯುತ್ತಿದ್ದೇನೆ. ಬಸವನಾಡಿನ ನಾನು ಬಸವೇಶ್ವರ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನ ಸಾರದಂತೆ ಜೀವನ ನಡೆಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next