ಭೋಪಾಲ್: ಬೆಂಗಳೂರು-ಮೈಸೂರು ನಡುವಿನ ದಶಪಥ ರಸ್ತೆ ಮಳೆ ಪ್ರಕೋಪಕ್ಕೆ ಮುಳುಗಿ ದೊಡ್ಡ ಗಲಾಟೆ ಕಾರಣವಾಗಿತ್ತು. ಆಗ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟೀಕೆಗೊಳಗಾಗಿದ್ದರು.
ಮಧ್ಯಪ್ರದೇಶದ ಜಬಲ್ಪುರದಲ್ಲೂ ಹೆದ್ದಾರಿಯೊಂದು ಹಾಳಾಗಿದೆ. ಇದಕ್ಕೆ ಸಚಿನ ಗಡ್ಕರಿ ನೇರವಾಗಿ ಸಭಾ ಕಾರ್ಯಕ್ರಮದಲ್ಲೇ ಕ್ಷಮೆ ಕೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಹೊಸ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಸಂತೋಷಗೊಂಡ ಜನ ಜೋರಾಗಿ ಚಪ್ಪಾಳೆ ಬಾರಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಮಧ್ಯಪ್ರದೇಶದ ಮಾಂಡ್ಲಾದಿಂದ ಜಬಲ್ಪುರ ಮಾರ್ಗದಲ್ಲಿ ಬರುವ 400 ಕೋಟಿ ರೂ. ವೆಚ್ಚದ 63 ಕಿ.ಮೀ. ರಸ್ತೆ ಹಾಳಾಗಿದೆ. ಇದನ್ನು ಗಡ್ಕರಿ ವೇದಿಕೆಯಲ್ಲೇ ಒಪ್ಪಿಕೊಂಡಿದ್ದಾರೆ.
Related Articles