Advertisement

ಖ್ಯಾತ ಇತಿಹಾಸಕಾರ, ಪದ್ಮವಿಭೂಷಣ ಬಾಬಾಸಾಹೇಬ್ ಪುರಂದರೆ ಇನ್ನಿಲ್ಲ

11:07 AM Nov 15, 2021 | Team Udayavani |

ಪುಣೆ : ಖ್ಯಾತ ಇತಿಹಾಸಕಾರ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಬಾಬಾಸಾಹೇಬ್ ಪುರಂದರೆ ಎಂದೇ ಖ್ಯಾತರಾಗಿದ್ದ ಬಲವಂತ ಮೊರೇಶ್ವರ ಪುರಂದರೆ ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಪುಣೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 99 ವರ್ಷ ಪ್ರಾಯಪಾಗಿತ್ತು.

Advertisement

ಅವರಿಗೆ ಒಂದು ವಾರದ ಹಿಂದೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ನಗರದ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಪುರಂದರೆ ಅವರು ಮರಾಠಾ ದೊರೆ ಛತ್ರಪತಿ ಶಿವಾಜಿಯ ಆಳ್ವಿಕೆಯ ಅವಧಿಗೆ ಸಂಬಂಧಿಸಿದ ಕಥೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಬರೆದಿದ್ದರು, ನಂತರ ಅವುಗಳನ್ನು ಸಂಕಲಿಸಿ “ತಿನಗ್ಯ” (“ಕಿಡಿಗಳು”) ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗಿತ್ತು.

ರಾಜಾ ಶಿವ-ಛತ್ರಪತಿ ಮತ್ತು ಕೇಸರಿ ಎಂಬ ಶೀರ್ಷಿಕೆಯ ಪುಸ್ತಕಗಳು ಮತ್ತು ನಾರಾಯಣರಾವ್ ಪೇಶ್ವೆಯವರ ಜೀವನದ ಪುಸ್ತಕವನ್ನು ಬರೆದಿದ್ದರು.

ಅವರ ಕೃತಿಗಳಲ್ಲಿ ಅತ್ಯಂತ ಪ್ರಸಿದ್ಧವಾದ ನಾಟಕ ಶಿವಾಜಿಯ ಕುರಿತಾದ ಜನತಾ ರಾಜ 1985 ರಲ್ಲಿ ಮೊದಲು ಪ್ರದರ್ಶಿಸಲಾಯಿತು. ಅಂದಿನಿಂದ ಈ ನಾಟಕವು ಮಹಾರಾಷ್ಟ್ರ, ಆಗ್ರಾ, ದೆಹಲಿ, ಭೋಪಾಲ್‌ನ 16 ಜಿಲ್ಲೆಗಳಲ್ಲಿ 1000 ಬಾರಿ ಪ್ರದರ್ಶನಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಮೂಲತಃ ಮರಾಠಿಯಲ್ಲಿ ಬರೆದ ಈ ಕೃತಿಯನ್ನು ನಂತರ ಹಿಂದಿಗೆ ಅನುವಾದಿಸಲಾಗಿದೆ.

Advertisement

ಪ್ರಧಾನಿ ಸಂತಾಪ

”ನನಗೆ ಹೇಳಲಾಗದಷ್ಟು ನೋವಾಗಿದೆ. ಶಿವಶಾಹಿರ್ ಬಾಬಾಸಾಹೇಬ್ ಪುರಂದರೆಯವರ ನಿಧನವು ಜಗತ್ತಿನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ದೊಡ್ಡ ಶೂನ್ಯವನ್ನು ಉಂಟುಮಾಡಿದೆ. ಮುಂಬರುವ ಪೀಳಿಗೆಯು ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಮತ್ತಷ್ಟು ಸಂಪರ್ಕ ಹೊಂದಲು ಕಾರಣವಾದ ಅವರಿಗೆ ಧನ್ಯವಾದಗಳು. ಅವರ ಕೃತಿಗಳು ಎಲ್ಲರ ನೆನಪಿನಲ್ಲಿ ಉಳಿಯುತ್ತವೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next