Advertisement

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

12:40 PM Oct 17, 2021 | Team Udayavani |

ಕೊಪ್ಪಳ: ನನಗೆ ರಾಜಕೀಯದಲ್ಲಿ 40 ವರ್ಷದ ಅನುಭವ ಇದೆ. ನಾನೂ 16 ಸಿಎಂ ಕಂಡಿದ್ದೇನೆ. ಅಂದಿನ ರಾಜಕಾರಣವೇ ಬೇರೆ. ಆದರೆ ಇಂದಿನ ರಾಜಕೀಯ ವ್ಯವಸ್ಥೆ ನನಗೆ ತೃಪ್ತಿ ಎಂದೆನಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಂದಿನ ರಾಜಕಾರಣದಲ್ಲಿ ನಾವು ಏನು ಮಾಡುತ್ತೇವೆ ಎಂದು ಜನರಿಗೆ ಹೇಳುತ್ತಿದ್ದೇವು. ಆದರೆ ಇಂದು ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಟೀಕೆ ಟಿಪ್ಪಣಿಗಳೆ ನಡೆಯುತ್ತಿವೆ ಎಂದು ಇಂದಿನ ರಾಜಕೀಯ ಟೀಕೆ ವಿಚಾರದ ಬಗ್ಗೆ ಮನದ ಮಾತು ವ್ಯಕ್ತಪಡಿಸಿದರು.

ಆರ್ ಎಸ್ಎಸ್ ಬಗ್ಗೆ ಎಚ್ ಡಿಕೆ ಹೇಳಿಕೆ ವೈಯಕ್ತಿಕ. ಅವರವರ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ರಾಜಕೀಯವನ್ನು ಮಾತನಾಡಲ್ಲ. ನಾನು ಎಲ್ಲ ಪಕ್ಷದವರಿಗೆ ಹೇಳುವುದಿಷ್ಟೆ, ಬರೀ ಟೀಕೆ ಮಾಡಬೇಡಿ. ಜನರ ವಿಶ್ವಾಸ ಗಳಿಸುವ ಕೆಲಸ ಮಾಡಿ. ಜನರ ಒಳಿತಿಗಾಗಿ ಸ್ಪಂದಿಸಿ ಎಂದರು.

ಇದನ್ನೂ ಓದಿ:ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಪರಿಣಾಮಕಾರಿ: ಡಿಸಿ

ವಿಪಕ್ಷ ನಾಯಕ ಸ್ಥಾನ ಪುಟಗೋಸಿ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಹಾಗೂ ವಿಪಕ್ಷ ಸ್ಥಾನ ಒಂದೇ ನಾಣ್ಯದ ಎರಡು ಮುಖಗಳು. ಎಲ್ಲರಿಗೂ ನಾನು ಹೇಳುವುದೊಂದೆ, ಯಾರೇ ಮಾತನಾಡಲಿ ವಿಚಾರ ಮಾಡಿ ಮಾತನಾಡಬೇಕು ಎಂದರು.

Advertisement

ಶಾಲೆಗಳನ್ನು ಆರಂಭಿಸಬೇಕು. ಮಕ್ಕಳು ಶಾಲೆ ಹಾದಿ ಮರೆತಿದ್ದಾರೆ. ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶಾಲೆ ಆರಂಭಿಸಬೇಕು. ಶಾಲೆ ನಡೆಯದಿದ್ದರೆ ತೊಂದರೆಯಾಗಲಿದೆ.  ಶಿಕ್ಷಕರ ಕೊರತೆ ನೀಗಿಸಬೇಕು. ನಿಯಮ ಸರಳೀಕರಣ ಮಾಡಬೇಕು. ಎನ್ಇಪಿ ಚೆನ್ನಾಗಿದೆ. ನರ್ಸರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು. ಪಾಲಕರು, ಜನರನ್ನು ಸೇರಿಸಿ ಚರ್ಚೆ ಮಾಡಬೇಕು. ಹಿಂದಿನ ವರದಿ ಕ್ರೋಢೀಕರಿಸಿ ನೀತಿ ರೂಪಿಸಲಿ. ಅವಸರದಲ್ಲಿ ಜಾರಿ ಮಾಡುವ ಅಗತ್ಯವಿಲ್ಲ ಎಂದು ಹೊರಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next