Advertisement

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

12:33 PM May 19, 2022 | Team Udayavani |

ಮೈಸೂರು: ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಎಂಬ ಊಹಾಪೋಹದ ಸುದ್ದಿಗಳಿಗೂ ನಮಗೂ ಸಂಬಂಧವಿಲ್ಲ. ನಾನು ಕೇಂದ್ರ ಸಚಿವೆಯಾಗಿ ದೊಡ್ಡ ಅವಕಾಶವನ್ನು ನಮ್ಮ ಪಕ್ಷ ನೀಡಿದೆ. ರಾಜ್ಯದಲ್ಲಿ ಹರಡುತ್ತಿರುವ ಸುದ್ದಿಗಳಿಗೂ ನನಗೂ ಸಂಬಂಧವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಗೋಮುಖ ವ್ಯಾಘ್ರತನ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರಿನ ಅಭಿವೃದ್ಧಿಗೆ ಅವರ ಕೊಡುಗೆ ಏನು ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ. ಐದು ವರ್ಷದ ಆಡಳಿತದಲ್ಲಿ ಒಂದು ಅಭಿವೃದ್ಧಿ ನಿರ್ಧಾರಗಳನ್ನ ಕೈಗೊಳ್ಳಲಿಲ್ಲ. ಲಿಂಗಾಯತರನ್ನ ಒಡೆಯುವುದು, ಹಿಂದುಳಿದ ಜಾತಿಯನ್ನು ಒಡೆಯುವುದು ಅವರು ಮಾಡಿದ ಅಭಿವೃದ್ಧಿ ಕಾರ್ಯ. ಅಂದು ಕೆಲಸ ಮಾಡದವರು ಮುಂದೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಪ್ರಕಟ : 85.63% ವಿದ್ಯಾರ್ಥಿಗಳು ಉತ್ತೀರ್ಣ; ಹುಡುಗಿಯರೇ ಮೇಲುಗೈ

ಸಿದ್ದರಾಮಯ್ಯನವರ ಎಲ್ಲಾ ಹೇಳಿಕೆಗಳು ಗಿಮಿಕ್. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಡಿಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ಸಿಗುವುದು ಎಂಬುದು ಮನೆ ಮುಂದೆ ನಾಳೆ ಬಾ ಎಂಬ ಬೋರ್ಡ್ ಇದ್ದಂತೆ. ಕಾಂಗ್ರೆಸ್ ನೊಳಗಿನ ಪೈಪೋಟಿಗಿಳಿದ ಎಲ್ಲಾ ಗಿಮಿಕ್ ಗಳ ಹೇಳಿಕೆಗಳನ್ನ ಸಿದ್ದರಾಮಯ್ಯ ನೀಡುತ್ತಿದ್ದಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next