Advertisement

ನಾನು ಅವನಲ್ಲ, ಅವಳು; ನನ್ನ ಮದುವೆ ಅಸಿಂಧುಗೊಳಿಸಿ!

03:45 AM Apr 04, 2017 | Harsha Rao |

ಮುಂಬಯಿ : ಆತ 31 ವರ್ಷದ ಉದ್ಯಮಿ. ತಾನು 11 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಕಳೆದ ವರ್ಷವಷ್ಟೇ ಮದುವೆಯಾಗಿದ್ದ. ಇದೀಗ ತನ್ನ ಮದುವೆಯನ್ನೇ ಅಸಿಂಧುಗೊಳಿಸಬೇಕು ಎಂದು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾನೆ!
ಅಚ್ಚರಿಯಾಯಿತೇ? ಆಗಲೇಬೇಕು. ಏಕೆಂದರೆ, ಆತ ನ್ಯಾಯಾಲಯದಲ್ಲಿ ವಿಚಿತ್ರವಾದ ಮುಂದಿಟ್ಟಿದ್ದಾನೆ. ಭಾರತ ಕಂಡ ಅಪರೂಪದಲ್ಲಿ ಅಪರೂಪ ಎಂಬಂಥ ಪ್ರಕರಣವಿದು. “ನಾನು ಜನಿಸಿದ್ದೇ ಹೆಣ್ಣಾಗಿ. ಮದುವೆಗೆ ಒಂದು ವರ್ಷ ಮುನ್ನ ಲಿಂಗ ಪರಿವರ್ತನೆ ಮಾಡಿಸಿ ಕೊಂಡಿದ್ದೆ. ಆದರೆ, ಅದು ಯಶಸ್ವಿಯಾದಂತೆ ಕಾಣುತ್ತಿಲ್ಲ. ತನಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನನ್ನ ಮದುವೆಯನ್ನು ಅಸಿಂಧು ಎಂದು ಘೋಷಿಸಿ’ ಎಂದು ಆತ ಕೋರಿದ್ದಾನೆ.

Advertisement

ಪ್ರೀತಿಗಾಗಿ ಲಿಂಗ ಪರಿವರ್ತನೆ: ಹೆಣ್ಣಾಗಿಯೇ ಹುಟ್ಟಿದ್ದರೂ, “ತಾನು ಹೆಣ್ಣಿನ ಶರೀರದಲ್ಲಿ ಸೇರಿಕೊಂಡಿರುವ ಗಂಡು’ ಎಂದೇ ಭಾವಿಸಿಕೊಂಡು ಬೆಳೆದಿದ್ದ ಆತ. ಜತೆಗೆ 11 ವರ್ಷಗಳ ಕಾಲ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೂ ಈತನನ್ನು ತನ್ನ ಬಾಯ್‌ ಫ್ರೆಂಡ್‌ ಎಂದೇ ಹೆತ್ತವರಿಗೆ ಪರಿಚಯಿಸಿದ್ದಳು. ನಂತರ, ಲಿಂಗ ಪರಿವರ್ತನೆ ಮಾಡಿಸಿ ಮದುವೆಯಾಗಲೂ ಒಪ್ಪಿದ್ದಳು. ಅಂತೆಯೇ ಶಸ್ತ್ರಚಿಕಿತ್ಸೆಯ ಒಪ್ಪಿಗೆ ಪತ್ರಕ್ಕೆ ಆಕೆಯೇ ಸಹಿ ಹಾಕಿದ್ದಳು. ಬಳಿಕ ವಿವಾಹ ವಾಗಿದ್ದಳು. ಆದರೆ, ಮದುವೆಯಾದ ಬಳಿಕವೂ ಪುರುಷನಂತಾಗದ್ದೇ ಈ ಎಲ್ಲ ಗೊಂದಲಕ್ಕೆ ಕಾರಣ ಎಂದಿದ್ದಾನೆ ಅರ್ಜಿದಾರ.

ಈಗ ಒಬ್ಬ ಹೆಣ್ಣು ಮತ್ತು ಗಂಡಾಗಿ ಲಿಂಗಬದಲಿಸಿದ ಹೆಣ್ಣಿನ ವಿವಾಹ ಸಿಂಧುವಾಗುತ್ತದೆಯೇ ಎಂಬುದನ್ನು ನ್ಯಾಯಾಲಯವೇ ತೀರ್ಮಾನಿಸಬೇಕು.

ಮತ್ತೂಂದು ವಿಶೇಷವೆಂದರೆ, ಅತ್ತ ಪತ್ನಿಯೂ ಕೋರ್ಟ್‌ ಮೆಟ್ಟಿಲೇರಿದ್ದಾಳೆ. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತಿ ಮತ್ತು ಆತನ ಮನೆಯವರ ವಿರುದ್ಧ ದೂರು ದಾಖಲಿಸಿರುವ ಆಕೆ, ನನಗೆ ಎಲ್ಲರೂ ಹಿಂಸೆ ನೀಡುತ್ತಾರೆ ಎಂದಿದ್ದಾಳೆ. “ಪತಿಯಿಂದ ವಿಚ್ಛೇದನ ಕೊಡಿಸಿ, ಮಾಸಿಕ 1 ಲಕ್ಷ ರೂ. ಜೀವನಾಂಶ ಮತ್ತು ವಾಸಕ್ಕೊಂದು ಮನೆ ನಿರ್ಮಿಸಿಕೊಡುವಂತೆ ಸೂಚಿಸಿ’ ಎಂದು ಮನವಿ ಮಾಡಿಕೊಂಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next