Advertisement

Team India; “ನಾನು ಧೋನಿ ಸ್ನೇಹಿತರಲ್ಲ..:” ಮನ ಬಿಚ್ಚಿ ಮಾತನಾಡಿದ ಯುವರಾಜ್ ಸಿಂಗ್

11:43 AM Nov 05, 2023 | Team Udayavani |

ಮುಂಬೈ: 2011ರ ಏಕದಿನ ವಿಶ್ವಕಪ್ ಗೆಲುವಿಗೆ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಎಷ್ಟು ಕಾರಣವೋ, ಅಷ್ಟೇ ಕಾರಣ ಯುವರಾಜ್ ಸಿಂಗ್ ಧೋನಿ ಕೂಡಾ. ಸೀಮಿತ ಓವರ್ ಕ್ರಿಕೆಟ್ ನಲ್ಲಿ ಭಾರತ ತಂಡ ಶ್ರೇಷ್ಠ ಬ್ಯಾಟರ್ ಗಳಾದ ಧೋನಿ ಮತ್ತು ಯುವರಾಜ್ ತಂಡಕ್ಕೆ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸದ್ಯ ಇಬ್ಬರೂ ನಿವೃತ್ತರಾಗಿದ್ದು, ಸದ್ಯ ವೈಯಕ್ತಿಕ ಜೀವನದಲ್ಲಿ ತೊಡಗಿಕೊಂಡಿದ್ದಾರೆ.

Advertisement

ಇದೀಗ ಯುವರಾಜ್ ಸಿಂಗ್ ಅವರು ತಮ್ಮ ಮತ್ತು ಧೋನಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ರಣವೀರ್ ಶೋ ಕಾರ್ಯಕ್ರಮದಲ್ಲಿ ಅವರು ‘ಎಂ.ಎಸ್ ಧೋನಿ ನನ್ನ ಮಿತ್ರನಲ್ಲ’ ಎಂದಿದ್ದಾರೆ.

“ನಾನು ಮತ್ತು ಮಾಹಿ ಆತ್ಮೀಯ ಸ್ನೇಹಿತರಲ್ಲ, ನಾವು ಕ್ರಿಕೆಟ್‌ ನಿಂದ ಸ್ನೇಹಿತರಾಗಿದ್ದೇವೆ. ನಾವು ಒಟ್ಟಿಗೆ ಆಡಿದ್ದೇವೆ. ಮಾಹಿಯ ಜೀವನಶೈಲಿ ನನಗಿಂತ ತುಂಬಾ ಭಿನ್ನವಾಗಿತ್ತು, ಆದ್ದರಿಂದ ನಾವು ಎಂದಿಗೂ ಆತ್ಮೀಯ ಸ್ನೇಹಿತರಾಗಿರಲಿಲ್ಲ. ನಾವು ಕ್ರಿಕೆಟ್‌ನಿಂದ ಮಾತ್ರ ಸ್ನೇಹಿತರಾಗಿದ್ದೇವೆ. ನಾನು ಮತ್ತು ಮಾಹಿ ಮೈದಾನಕ್ಕೆ ಹೋದಾಗ ನಾವು ನಮ್ಮ ದೇಶಕ್ಕೆ 100% ಕ್ಕಿಂತ ಹೆಚ್ಚು ಕೊಟ್ಟಿದ್ದೇವೆ. ಅದರಲ್ಲಿ ಅವರು ಕ್ಯಾಪ್ಟನ್, ನಾನು ಉಪನಾಯಕನಾಗಿದ್ದೆ” ಎಂದಿದ್ದಾರೆ.

“ನಿಮ್ಮ ತಂಡದ ಸದಸ್ಯರು ಮೈದಾನದ ಹೊರಗೆ ನಿಮ್ಮ ಉತ್ತಮ ಸ್ನೇಹಿತರಾಗಬೇಕಾಗಿಲ್ಲ. ಪ್ರತಿಯೊಬ್ಬರೂ ವಿಭಿನ್ನ ಜೀವನಶೈಲಿ, ಕೌಶಲ್ಯವನ್ನು ಹೊಂದಿದ್ದಾರೆ. ಕೆಲವು ಜನರು ನಿರ್ದಿಷ್ಟ ಜನರೊಂದಿಗೆ ಹ್ಯಾಂಗ್ ಔಟ್ ಮಾಡುತ್ತಾರೆ, ನೀವು ಎಲ್ಲರೊಂದಿಗೆ ಉತ್ತಮ ಸ್ನೇಹಿತರಾಗಿರಬೇಕಾಗಿಲ್ಲ. ನೀವು ಯಾವುದೇ ತಂಡವನ್ನು ತೆಗೆದುಕೊಂಡರೆ, ಎಲ್ಲಾ ಹನ್ನೊಂದು ಮಂದಿ ಹೊಂದಿಕೆಯಾಗುವುದಿಲ್ಲ. ನೀವು ಮೈದಾನದಲ್ಲಿರುವಾಗ ನಿಮ್ಮ ಅಹಂಕಾರವನ್ನು ನಿಮ್ಮ ಹಿಂದೆ ಇರಿಸಿ ಆಡಬೇಕು” ಎಂದರು.

“ಮೈದಾನದಲ್ಲಿ ಮಾಹಿ ಗಾಯಗೊಂಡಾಗ ನಾನು ರನ್ನರ್ ಆಗಿದ್ದೆ. ಒಮ್ಮೆ ಮಾಹಿ 90 ರನ್ ಗಳಿಸಿ ಆಡುತ್ತಿದ್ದಾಗ ಅವರು ಶತಕ ಗಳಿಸಲು ನಾನು ಸ್ಟ್ರೈಕ್ ನೀಡಿದ್ದೆ. ಅದೇ ರೀತಿ ನಾನು 48 ರನ್ ಗಳಿಸಿದ್ದಾಗ ಅವರು ಬಾಲ್ ಡಿಫೆಂಡ್ ಮಾಡಿ ನನಗೆ ಅರ್ಧಶತಕ ಗಳಿಸಲು ನೆರವಾದರು” ಎಂದು ಯುವರಾಜ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next