Advertisement

ಎರಡು ಜಿಲ್ಲೆಗಳಿಗೆ ನಾನು ಸೀಮಿತ: ಪ್ರಸಾದ್‌

12:27 PM Mar 16, 2018 | Team Udayavani |

ಮೈಸೂರು: ಮುಂಬರುವ ಚುನಾವಣೆ ದೃಷ್ಟಿಯಿಂದ ಮೈಸೂರು, ಚಾಮರಾಜ ನಗರ ಜಿಲ್ಲೆಗಳ 15 ಕ್ಷೇತ್ರಗಳಿಗೆ ಸೀಮಿತವಾಗಿ ತಾವು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮೂರು ಪಕ್ಷಗಳಲ್ಲೂ ಸಾಕಷ್ಟು ತಯಾರಿ ನಡೆಯುತ್ತಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಾಯಕರುಗಳು ಪ್ರವಾಸ, ಪ್ರಚಾರ ಆರಂಭಿಸಿದ್ದಾರೆ. ತಾವು ಕೂಡ ಮೈಸೂರು, ಚಾಮರಾಜ ನಗರದ ಕ್ಷೇತ್ರಗಳಿಗೆ ಭೇಟಿ ನೀಡಿರುವುದಾಗಿ ಹೇಳಿದರು. ಬಿಜೆಪಿಯಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ.

ಆದರೆ, ಯಾರಿಗೆ ಟಿಕೆಟ್‌ ಎನ್ನುವುದು ಪಟ್ಟಿ ಪ್ರಕಟವಾದ ನಂತರ ತಿಳಿಯಲಿದೆ. ರಾಷ್ಟ್ರೀಯ ಪಕ್ಷವಾಗಿರುವುದರಿಂದ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆದಿದೆ. ನನ್ನ ಸಲಹೆಗಳನ್ನೂ ಕೊಟ್ಟಿದ್ದೇನೆ ಎಂದರು. ನಂಜನಗೂಡು ಕ್ಷೇತ್ರದಲ್ಲಿ ತಮ್ಮ ಅಳಿಯ ಹರ್ಷವರ್ಧನ್‌ಗೆ ಟಿಕೆಟ್‌ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ, ಅವರು ಆಕಾಂಕ್ಷಿಗಳಾಗುವುದರಲ್ಲಿ ತಪ್ಪೆನಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next